More

    ಸಿಮೆಂಟ್​ ಚೀಲದಲ್ಲಿತ್ತು ಯುವತಿಯ ಮೃತ ದೇಹ; ಆತ್ಮಹತ್ಯೆ ಎಂದ ಪೊಲೀಸರು

    ಕೋಲ್ಕತ: ಡ್ರಗ್ಸ್​ ಸೇವನೆ ಚಟಕ್ಕೆ ಅಂಟಿಕೊಂಡಿದ್ದ ಯುವತಿಯೊಬ್ಬಳ ಮೃತ ದೇಹ ಕೋಲ್ಕತದಲ್ಲಿ ಪತ್ತೆಯಾಗಿದೆ. ಸಿಮೆಂಟ್​ ಚೀಲದಲ್ಲಿ ಮೃತ ದೇಹ ಸಿಕ್ಕಿದ್ದು, ಇದು ಆತ್ಮಹತ್ಯೆ ಇದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

    ಸಬಾ ಖಾತೂನ್​ ಅಲಿಯಾಸ್​ ನೈನಾ(20) ಕೋಲ್ಕತದಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಇತ್ತೀಚೆಗೆ ಆಕೆ ಪಿಜಿಗೆ ಸೇರಿಕೊಂಡಿದ್ದಾಳೆ. ವಿಪರೀತವಾಗಿ ಡ್ರಗ್ಸ್​ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ. ಡ್ರಗ್ಸ್​ಗೆ ಹಣ ಒಟ್ಟು ಮಾಡಲು ಅನೇಕರನ್ನು ಭೇಟಿ ಮಾಡುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

    ಇದನ್ನೂ ಓದಿ: ಗ್ರಾಮದಲ್ಲಿದ್ದವರಿಗೆಲ್ಲ ಕರೊನಾ ವೈರಸ್ ಸೋಂಕು- ಒಬ್ಬ ಮಾತ್ರ ಬಚಾವ್​ !

    ನಗರದ ಎಂಎಂ ಆಲಿ ರಸ್ತೆಯಲ್ಲಿ ಬಿದ್ದಿದ್ದ ಸಿಮೆಂಟ್​ ಚೀಲದಲ್ಲಿ ಯುವತಿಯ ಮೃತ ದೇಹ ಸಿಕ್ಕಿದೆ. ಚೀಲದಿಂದ ಹೊರಬಂದಿದ್ದ ಕಾಲು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿಯ ಗುರುತು ಪತ್ತೆ ಹಚ್ಚಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಕೆಯನ್ನು ಕೊಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆಕೆಯ ಕುತ್ತಿಗೆಯ ಭಾಗದಲ್ಲಿರುವ ಮಾರ್ಕ್​ಗಳನ್ನು ಗಮನಿಸಿದರೆ ಇದೊಂದು ಆತ್ಮಹತ್ಯೆ ಪ್ರಕರಣ ಎನಿಸುವಂತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇನ್ನಷ್ಟು ವಿಚಾರಗಳು ಹೊರಬರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

    ಹುಡುಗನೊಂದಿಗೆ ಚಾಟ್​ ಮಾಡುತ್ತಿದ್ದ ತಂಗಿಗೆ ಗುಂಡಿಕ್ಕಿದ ಅಣ್ಣ; ಜೈಲು ಪಾಲಾದ ಅಪ್ರಾಪ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts