More

    ಈ ವರ್ಷದ ಅತಿ ಕೆಟ್ಟ ಪಾಸ್​ವರ್ಡ್​ಗಳಿವು; ನೀವೂ ಇದೇ ಪಾಸ್​ವರ್ಡ್​ ಇಟ್ಟಿದ್ದರೆ ಬೇಗ ಬದಲಾಯಿಸಿಕೊಳ್ಳಿ

    ನವದೆಹಲಿ: ಈಗೇನಿದ್ದರೂ ಡಿಜಿಟಲ್​ ಯುಗ. ಎಲ್ಲದಕ್ಕೂ ಒಟಿಪಿ, ಪಾಸ್​ವರ್ಡ್​ ಕಡ್ಡಾಯವೆನ್ನುವಂತಾಗಿದೆ ಬದುಕು. ಆದರೆ ನೀವು ಗೌಪ್ಯವಾಗಿಡುವ ಪಾಸ್​ವರ್ಡ್​ಗಳು ಅದೆಷ್ಟು ಸೇಫ್​ ಎನ್ನುವುದು ನಿಮಗೆ ಗೊತ್ತಿದೆಯೇ?

    ಇದನ್ನೂ ಓದಿ: ಹುಡುಗನೊಂದಿಗೆ ಚಾಟ್​ ಮಾಡುತ್ತಿದ್ದ ತಂಗಿಗೆ ಗುಂಡಿಕ್ಕಿದ ಅಣ್ಣ; ಜೈಲು ಪಾಲಾದ ಅಪ್ರಾಪ್ತ

    ಸಾಮಾನ್ಯವಾಗಿ ಪಾಸ್​ವರ್ಡ್​ ಕೊಡಬೇಕೆಂದರೆ, ನಾವು ನೆನಪಿನಲ್ಲಿಟ್ಟುಕೊಳ್ಳುವಂತದ್ದನ್ನೇ ಕೊಡಬೇಕು. ಆ ಪಟ್ಟಿಯಲ್ಲಿ ಮೊದಲು ಬರುವುದು 123456789… ಆದರೆ ಇಂತಹ ಮಾಮೂಲಿ ಪಾಸ್​ವರ್ಡ್​ಗಳು ನಿಮ್ಮ ಖಾತೆಗಳಿಗೆ ಅಷ್ಟೇ ಡೇಂಜರಸ್​ ಕೂಡ.

    ಜಾಗತಿಕವಾಗಿ ಜನರು ಬಳಕೆ ಮಾಡುವ ಅತಿ ಕೆಟ್ಟ ಪಾಸ್​ವರ್ಡ್​ಗಳ ಪಟ್ಟಿಯನ್ನು ನಾರ್ಡ್​ಪಾಸ್​ ಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ 2020ರಲ್ಲಿ 123456 ಪಾಸ್​ವರ್ಡ್​ ಅತಿ ಹೆಚ್ಚು ಬಳಕೆಯಾಗಿದೆಯಂತೆ. ಹಾಗೆಯೇ ಇದು ಅತ್ಯಂತ ಕೆಟ್ಟ ಪಾಸ್​ವರ್ಡ್​ ಎನ್ನುವುದನ್ನೂ ಸಂಸ್ಥೆ ಹೇಳಿದೆ. 123456 ಪಾಸ್​ವರ್ಡ್​ನ್ನು 23 ಮಿಲಿಯನ್​ಗೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಹ್ಯಾಕರ್​ಗಳಿಗೆ ಈ ಪಾಸ್​ವರ್ಡ್​ ಕಂಡುಹಿಡಿಯಲು ಒಂದು ಸೆಕೆಂಡಿಗಿಂತ ಕಡಿಮೆ ಸಮಯ ಸಾಕಾಗುತ್ತದಂತೆ.

    ಇದನ್ನೂ ಓದಿ: ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

    ಕೆಟ್ಟ ಮತ್ತು ಅತಿ ಹೆಚ್ಚು ಬಳಕೆಯ ಪಾಸ್​ವರ್ಡ್​ಗಳ ಪಟ್ಟಿಯಲ್ಲಿ 123456789 ಎರಡನೇ ಸ್ಥಾನದಲ್ಲಿದೆ. ಇದನ್ನೂ ಕೂಡ ಹ್ಯಾಕರ್​ಗಳು ಒಂದು ಸೆಕೆಂಡಿಗಿಂತ ಕಡಿಮೆ ಸಮದಯಲ್ಲಿ ಕಂಡುಹಿಡಿಯಬಲ್ಲರು. ಉಳಿದಂತೆ ‘ಪಾಸ್​ವರ್ಡ್​’, ‘123123’, ‘12345’, ‘1234567890’ ಮುಂತಾದ ಪಾಸ್​ವರ್ಡ್​ಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. (ಏಜೆನ್ಸೀಸ್​)

    ಸಿಮೆಂಟ್​ ಚೀಲದಲ್ಲಿತ್ತು ಯುವತಿಯ ಮೃತ ದೇಹ; ಆತ್ಮಹತ್ಯೆ ಎಂದ ಪೊಲೀಸರು

    ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts