More

    ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ 6 ಸಾವಿರ ರೂಪಾಯಿ

    ಜೈಪುರ: ಹೆರಿಗೆ ಸಮಯದಲ್ಲಿ ಹೆಣ್ಣು ಮಕ್ಕಳು ಆರೋಗ್ಯವಾಗಿರುವುದು ಅವಶ್ಯಕ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಗರ್ಭಿಣಿಯರು ಅಪೌಷ್ಠಿಕತೆಯಿಂದಾಗಿ ಸಾವನ್ನಪ್ಪುತ್ತಾರೆ. ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಅದೇ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಹೊಸದೊಂದು ಯೋಜನೆಯನ್ನು ಆರಂಭಿಸಿದೆ.

    ಇದನ್ನೂ ಓದಿ: ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

    ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ರಾಜಸ್ಥಾನ ಮುಖ್ಯ ಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಇಂದಿರಾ ಗಾಂಧಿ ಮಾತೃತ್ವ ಪೋಷಣ ಯೋಜನೆಗೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ 6 ಸಾವಿರ ರೂಪಾಯಿ ನೀಡಲಾಗುವುದು. ಐದು ಹಂತಗಳಲ್ಲಿ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಅವರು ಹೇಳಿದ್ದಾರೆ.

    ಸದ್ಯಕ್ಕೆ ಈ ಯೋಜನೆಯನ್ನು ಉದಯ್​ಪುರ, ಬಾಣಸ್ವಾರ, ಡುಂಗಾರ್ಪುರ ಮತ್ತು ಪ್ರತಾಪ್​ಗಢದಲ್ಲಿ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಪೂರ್ತಿ ರಾಜ್ಯದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರದಿಂದಲೂ ಇಂತದ್ದೊಂದು ಯೋಜನೆಯನ್ನು ಆರಂಭಿಸಲು ಪ್ರಧಾನಿಯವರಿಗೆ ಮನವಿ ಮಾಡುತ್ತೇನೆ ಎಂದು ಗೆಹ್ಲೋಟ್​ ಅವರು ಹೇಳಿದ್ದಾರೆ.

    ಇದನ್ನೂ ಓದಿ: ಮುಸ್ಲಿಂ ಯುವತಿಯನ್ನು ಮದುವೆಯಾಗಲು ಬಯಸಿದ ಹಿಂದೂವಿನ ಬರ್ಬರ ಹತ್ಯೆ

    ಇದೀಗ ಜಾರಿಗೊಳಿಸಲಾಗಿರುವ ಯೋಜನೆಯಿಂದ ಪ್ರತಿ ವರ್ಷ 77 ಸಾವಿರ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ. ಪ್ರತಿ ವರ್ಷ 43 ಕೋಟಿ ರೂಪಾಯಿ ಹಣ ಈ ಯೋಜನೆಗೆ ಖರ್ಚಾಗಲಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಈ ವರ್ಷದ ಅತಿ ಕೆಟ್ಟ ಪಾಸ್​ವರ್ಡ್​ಗಳಿವು; ನೀವೂ ಇದೇ ಪಾಸ್​ವರ್ಡ್​ ಇಟ್ಟಿದ್ದರೆ ಬೇಗ ಬದಲಾಯಿಸಿಕೊಳ್ಳಿ

    ಸಿಮೆಂಟ್​ ಚೀಲದಲ್ಲಿತ್ತು ಯುವತಿಯ ಮೃತ ದೇಹ; ಆತ್ಮಹತ್ಯೆ ಎಂದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts