

ಗಾಂಧಿನಗರ: ಮುಸ್ಲಿಂ ಯುವತಿಯೋರ್ವಳನ್ನು ಮದುವೆಯಾಗಲು ಬಯಸಿದ ಹಿಂದೂ ಪುರುಷನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಯುವತಿಯ ಅಮ್ಮ ಮತ್ತು ಆಕೆಯನ್ನು ಮದುವೆಯಾಗಲಿದ್ದ ಯುವಕನೇ ಈ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.
ಗುಜರಾತ್ನ ಭರೂಚ್ನ ಮಾಡೆಲ್ ಟೌನ್ ನಿವಾಸಿ ನೀರಜ್ ಗುಪ್ತಾ ತನ್ನ ಸಹೋದ್ಯೋಗಿ ಫೈಜಲ್ನನ್ನು ಪ್ರೀತಿಸಲಾರಂಭಿಸಿದ್ದ. 46 ವರ್ಷ ವಯಸ್ಸಾಗಿದ್ದ ಆತ ತನ್ನ ಪ್ರೀತಿಯ ಬಗ್ಗೆ ಪತ್ನಿಗೂ ತಿಳಿಸಿದ್ದ. ಫೈಜಲ್ ಮತ್ತು ನೀರಜ್ ಮಧ್ಯೆ ದೈಹಿಕ ಸಂಬಂಧವೂ ಇತ್ತು ಎಂದಿದ್ದಾರೆ ಆತನ ಪತ್ನಿ.
ಆದರೆ ಕಳೆದ ಕೆಲ ದಿನಗಳ ಹಿಂದೆ ನೀರಜ್ ಕಾಣೆಯಾಗಿದ್ದಾನೆ. ಈ ವಿಚಾರವಾಗಿ ಪೊಲೀಸ್ ದೂರು ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನೀರಜ್ನ ಫೋನ್ ಕಾಲ್ ರೆಕಾರ್ಡಿಂಗ್ನಿಂದಲೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ನೀರಜ್ ಕಾಣೆಯಾಗಿರುವುದಕ್ಕೆ ಫೈಜಲ್ ಕಾರಣವಿರಬಹುದು ಎನ್ನುವ ಅನುಮಾನ ಬಂದ ಆತನ ಪತ್ನಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಅದರಂತೆ ಫೈಜಲ್ಳ ವಿಚಾರಣೆ ನಡೆಸಲಾಗಿದೆ.
ಫೈಜಲ್ಳ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಫೈಜಲ್ ನೀರಜ್ನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತ ಆಕೆಯ ಕುಟುಂಬ ಅವಳಿಗೆ ಜುಹೇಬ್ ಹೆಸರಿನ ಯುವಕನೊಂದಿಗೆ ಮದುವೆ ನಿಶ್ಚಯಿಸಿದೆ. ಆ ಹಿನ್ನೆಲೆಯಲ್ಲಿ ಆಕೆಯ ಮನೆಗೆ ಬಂದ ನೀರಜ್, ಅವಳಿಗೆ ಮದುವೆಯಾಗುವುದಿಲ್ಲವೆಂದು ಹೇಳು ಎಂದು ಕೇಳಿದ್ದಾನೆ. ಆ ಸಮಯದಲ್ಲಿ ಫೈಜಲ್ಳ ತಾಯಿ ಮತ್ತು ಜುಹೇಬ್ ನೀರಜ್ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಪ್ರಾಣ ಹೋಗುವಷ್ಟು ಹೊಡೆದು, ಸೂಟ್ಕೇಸ್ ಒಂದರಲ್ಲಿ ತುಂಬಿಸಿದ್ದಾರೆ. ಅದಾದ ನಂತರ ಅಲ್ಲಿಂದ ಗುಜರಾತ್ಗೆ ತೆರಳಿದ್ದಾರೆ.
ಈ ಎಲ್ಲ ವಿಚಾರ ತಿಳಿದ ನಂತರ ಇದೀಗ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್)