More

    ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ

    ಪಟನಾ: ಬಿಹಾರದಲ್ಲಿ ನಿತೀಶ್​ ಕುಮಾರ್​ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಅತ್ಯಂತ ಕಡಿಮೆ ಮತದಲ್ಲಿ ಮುನ್ನಡೆ ಸಾಧಿಸಿದ ಎನ್​ಡಿಎ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಸಾಲು ಸಾಲು ದೂರು ನೀಡಲಾರಂಭಿಸಿದೆ. ಆಡಳಿತ ಪಕ್ಷದ ಶಾಸಕರೊಬ್ಬರಿಗೆ ರಾಷ್ಟ್ರಗೀತೆಯೇ ಬರುವುದಿಲ್ಲ ಎನ್ನುವ ದೂರನ್ನೂ ಮಾಡಿದೆ. ಅದಕ್ಕೆ ಸಾಕ್ಷಿಯಾಗಿ ಶಾಸಕರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವಿಡಿಯೋವನ್ನೂ ಶೇರ್​ ಮಾಡಲಾಗಿದೆ.

    ಇದನ್ನೂ ಓದಿ: ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ

    ಎನ್​ಡಿಎ ಸರ್ಕಾರದ ಶಿಕ್ಷಣ ಸಚಿವರಾಗಿ ಮೇವಾಲಾಲ್​ ಚೌಧರಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರ ಮೇಲೆ 2017ರ ಭ್ರಷ್ಟಾಚಾರ ಆರೋಪವಿರುವ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ಕೊಡುವಂತಿಲ್ಲ ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಅದರ ಬೆನ್ನಲ್ಲೇ ಮೇವಾಲಾಲ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಕೂಡ. ಆದರೆ ಇದೀಗ ಅವರೇ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ನಿಜ ಹೇಳಬೇಕೆಂದರೆ ಮೇವಾಲಾಲ್​ ಅವರಿಗೆ ನಮ್ಮ ರಾಷ್ಟ್ರಗೀತೆಯೇ ಬರುವುದಿಲ್ಲ. ಯಾವುದೋ ಗ್ರಾಮದಲ್ಲಿ ಧ್ವಜಾರೋಹಣ ಮಾಡಿದ ಅವರು ರಾಷ್ಟ್ರಗೀತೆ ಹಾಡಿದ್ದಾರೆ. ಅವರು ಹಾಡಿರುವ ಗೀತೆಯನ್ನು ಕೇಳಿದರೆ, ಅವರಿಗೆ ರಾಷ್ಟ್ರಗೀತೆ ಬರುವುದಿಲ್ಲ ಎನ್ನುವುದನ್ನು ಯಾರಾರದೂ ಹೇಳುವಂತಿದೆ. ಆ ವಿಡಿಯೋವನ್ನು ಇದೀಗ ವಿರೋಧ ಪಕ್ಷವಾದ ಆರ್​ಜೆಡಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ.

    ಇದನ್ನೂ ಓದಿ: ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು

    ‘ಹಗರಣಗಳ ಗೂಡಾಗಿರುವ ಶಿಕ್ಷಣ ಸಚಿವ ಮೇವಾಲಾಲ್​ ಅವರಿಗೆ ರಾಷ್ಟ್ರಗೀತೆಯೇ ಬರುವುದಿಲ್ಲ. ನಿತೀಶ್​ ಕುಮಾರ್​ ಅವರಿಗೆ ನಿಮಗೆ ಇದಕ್ಕಿಂತ ಇನ್ನೂ ಅವಮಾನ ಆಗುವುದು ಬಾಕಿಯಿದೆಯೇ?’ ನಿಮ್ಮ ಆತ್ಮಸಾಕ್ಷಿ ಎಲ್ಲಿ ಮುಳುಗಿ ಹೋಗಿದೆ? ಎಂದು ಆರ್​ಜೆಡಿ ಪ್ರಶ್ನಿಸಿದೆ. (ಏಜೆನ್ಸೀಸ್​)

    ಮುಂಬೈನಲ್ಲಿ ಶಿವಸೇನೆಗೆ ಉಲ್ಟಾ ಹೊಡೆದ ಕಾಂಗ್ರೆಸ್​; ಸ್ವತಂತ್ರವಾಗಿ ಸ್ಪರ್ಧಿಸೋಕೆ ಕಾಂಗ್ರೆಸ್​ ರೆಡಿ

    ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts