More

    ವಿದೇಶಿ ವಿನಿಮಯ ಉಲ್ಲಂಘನೆ; ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ಸಿಎಂ ಪುತ್ರನಿಗೆ ED ನೋಟಿಸ್

    ಜೈಪುರ: ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹಲೋಟ್​ ಅವರ ಪುತ್ರ ವೈಭವ್​ ಗೆಹ್ಲೋಟ್​ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ನೋಟಿಸ್​ ಜಾರಿ ಮಾಡಿದೆ.

    ವಿದೇಶಿ ವಿನಿಮಯ ಕಾಯ್ದೆ (FEMA), 1999ರ ಅನ್ವಯ ಅಕ್ಟೋಬರ್​ 27ರಂದು ಜೈಪುರ ಅಥವಾ ನವದೆಹಲಿಯಲ್ಲಿ ವಿಚಾರಣೆಗೆ ಹಾಜರಗುವಂತೆ ವೈಭವ್​ ಗೆಹ್ಲೋಟ್​ಗೆ ನೋಟಿಸ್​ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ED) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇತ್ತೀಚಿಗೆ ರಾಜಸ್ಥಾನ ಮೂಲದ ಹಾಸ್ಪಿಟಾಲಿಟಿ ಗ್ರೂಪ್ ಟ್ರಿಟಾನ್ ಹೋಟೆಲ್ಸ್ & ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ನಡೆದ ED ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ವೈಭವ್​ ಗೆಹ್ಲೋಟ್​ಗೆ ನೋಟಿಸ್ ಜಾರಿ ಮಾಡಲಾಗಿದೆ.

    ಇದನ್ನೂ ಓದಿ: ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ; ಮಗು ಸೇರಿದಂತೆ 12 ಮಂದಿ ಮೃತ್ಯು

    ಚುನಾವಣೆಯ ಹೊಸ್ತಿಲಲ್ಲಿ ಕೆಂದ್ರದಲ್ಲಿರುವ ಬಿಜೆಪಿ ಸರ್ಕಾರ ಈ ರೀತಿ ದಾಳಿ ಮಾಡಿಸುವ ಮೂಲಕ ನಮ್ಮ ಧ್ವನಿಯನ್ನು ಹತ್ತಿಕ್ಕಲು ನೋಡುತ್ತಿದೆ. ನಿನ್ನೆ ಕಾಂಗ್ರೆಸ್​ ಭರವಸೆ ನೀಡಿದೆವು ಇಂದು ರಾಜ್ಯ ಘಟಕದ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡಲಾಗಿದೆ. ನಾಳೆ ನನ್ನ ಮಗನಿಗೆ ವಿಚಾರಣೆಗೆ ಹಾಜರಗುವಂತೆ ನೋಟಿಸ್ ನೀಡಲಾಗಿದೆ. ರಾಜಸ್ಥಾನದಲ್ಲಿ ನಾವು ಮತ್ತೊಮ್ಮೆ ಗೆಲ್ಲುತ್ತೇವೆ ಎಂದು ಅರಿತಿರುವ ಬಿಜೆಪಿ ಜನರ ಮನಸ್ಸನ್ನು ಗೆಲ್ಲಲಾಗದೆ ಈ ರೀತಿ ಮಾಡುತ್ತಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಕಿಡಿಕಾರಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts