More

    ದೇವರಗಟ್ಟು ದಂಡ ಕಾಳಗ; ಮೂರು ಮಂದಿ ಮೃತ್ಯು, 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಅಮರಾವತಿ: ಬನ್ನಿ ಹಬ್ಬದ ಪ್ರಯುಕ್ತ ನಡೆದ ದಂಡ ಕಾಳಗದಲ್ಲಿ ಮೂವರು ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂದ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಕರ್ನೂಲ್ ಜಿಲ್ಲೆಯ ಗಣೇಶ್ (19), ರಾಮಾಂಜೆಯಲು (59) ಮತ್ತು ಬಳ್ಳಾರಿ ಮೂಲದ ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿಗೆ ಹೊಳಗುಂದ ಮಂಡಲವು ಹೊಂದಿಕೊಂಡಿದ್ದು, ಅನೇಕ ಮಂದಿ ಕನ್ನಡ ಭಾಷಿಕರು ಇಲ್ಲಿ ವಾಸಿಸುತ್ತಿದ್ದಾರೆ.

    Stick Fight

    ಇದನ್ನೂ ಓದಿ: ಹುಲಿ ಉಗುರು ಪ್ರಕರಣ; ನಾನು ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲ ಪಾಚ್ಕೊಳಿ ಎಂದ ನಟ ಜಗ್ಗೇಶ್

    ಕೋಲು ಕಾಳಗವನ್ನು ಕೆಲವರು ಮರವನ್ನು ಏರಿ ವೀಕ್ಷಿಸುತ್ತಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಬೆಂಕಿ ಉಂಡೆಗಳನ್ನು ಎಸೆದ ಕಾರಣ ಅದರಿಂದ ತಪ್ಪಿಸಿಕೊಳ್ಳು ಹೋಗಿ ಮರದ ಕೊ.ಬೆಯಿಂದ ಬಿದ್ದು, ಮೂವರು ಮೃತಪಟ್ಟಿದ್ದಾರೆ. ಮರದಿಂದ ಬಿದ್ದವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಾಳಮ್ಮ-ಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಲ್ಯಾಣೋತ್ಸವದ ಅಂಗವಾಗಿ ನಡೆದ ಧಾರ್ಮಿಕ ವಿಧಿ-ವಿಧಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಹೊಳಗುಂದ ಮಂಡಲದ ವಿವಿಧ ಗ್ರಾಮಗಳ ಜನರು ಸ್ಥಳೀಯ ದೇವತೆಗಳ ವಿಗ್ರಹಗಳನ್ನು ಪಡೆಯಲು ಕೋಲುಗಳನ್ನು ಹಿಡಿದು ಕಾಳಗದಲ್ಲಿ ತೊಡಗುತ್ತಾರೆ. ಈ ವೇಳೆ ಅವಘಡ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts