ಮದ್ಯಪಾನ ಮಾಡಬೇಡ ಎಂದು ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ವಿಷ ಕುಡಿದ!; ಮತ್ತೂ ಮತ್ತು ಬೇಕೆಂದವನ ಮೃತ್ಯು..

Crime
Published on

ಉತ್ತರಕನ್ನಡ: ಮದ್ಯಪಾನ ಮಾಡಬೇಡ ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಬೇಸರ ಮಾಡಿಕೊಂಡ ಮಗ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊನ್ನೆಗದ್ದೆ ಗ್ರಾಮದ ನಾಗೇಂದ್ರ ಈಶ್ವರ ಚನ್ನಯ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಈತ ಮದ್ಯವ್ಯಸನಿಯಾಗಿದ್ದ.

ಮಗ ಅತಿಯಾಗಿ ಮದ್ಯ ಕುಡಿಯುತ್ತಿದ್ದುದರಿಂದ ನೊಂದಿದ್ದ ತಾಯಿ, ಮದ್ಯಪಾನ ಮಾಡಬೇಡ ಎಂದು ಬುದ್ಧಿಮಾತು ಹೇಳಿದ್ದರು. ಆದರೆ ಮಗ ಅಷ್ಟಕ್ಕೇ ಬೇಸರ ಮಾಡಿಕೊಂಡು ಮನೆಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net