ತಾಯಿಯೊಂದಿಗೆ ಕಲಹ: ಸೂಜಿಯಿಂದ ಹತ್ಯೆಗೈದ ಮಗ

police (1)
ಸಾಂದರ್ಭಿಕ ಚಿತ್ರ
Published on

ದೆಹಲಿ: ವೃದ್ಧ ತಾಯಿಯನ್ನು ಹಲವು ಬಾರಿ ಸೂಜಿಯಿಂದ ಚುಚ್ಚಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಲ್ಲ ಎಸಿ ರೈಲುಗಳ ಟಿಕೆಟ್​ ದರ ಕಡಿತ

ಮಹಿಳೆಯನ್ನು 64 ವರ್ಷದ ಸತ್ವಂತ್ ಕೌರ್ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪುತ್ರ ರಿಂಕು ಡಿಯೋಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ವಂತ್ ಕೌರ್ ಪತಿ ಪ್ರೀತಮ್ ಸಿಂಗ್ ಮತ್ತು ಮಗ ರಿಂಕುವಿನೊಂದಿಗೆ ರೋಹಿಣಿ ಸೆಕ್ಟರ್-15ರ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಕೌರ್ ನಿವೃತ್ತ ಅತಿಥಿ ಶಿಕ್ಷಕಿಯಾಗಿದ್ದು, ಆಕೆಯ ಗಂಡ ಪ್ರೀತಮ್ ಸಿಂಗ್ ಎಂಸಿಡಿ ಉದ್ಯೋಗಿಯಾಗಿದ್ದಾನೆ.

ಮಗ ರಿಂಕು ಸಿಂಗ್​ ಮಾನಸಿಕವಾಗಿ ನೊಂದಿದ್ದು, ತಾಯಿಯೊಂದಿಗೆ ಜಗಳವಾಡುತ್ತಿದ್ದ. ಆತ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ತಾಯಿಯೊಂದಿಗೆ ವಾಗ್ವಾದ ನಡೆದು ತಾಯಿಯನ್ನು ಹಲವು ಬಾರಿ ಸೂಜಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: VIDEO| ಮತದಾನ ನಡೆಯುವಾಗಲೇ ಮತಪೆಟ್ಟಿಗೆಯೊಂದಿಗೆ ಓಡಿಹೋದ ಭೂಪ

ಇದಾದ ಬಳಿಕ ಆತನೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ ಮನೆಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳಿದ್ದವು. ಪೊಲೀಸರು ತಕ್ಷಣವೇ ಕೌರ್​ನ್ನು ಆಸ್ಪತ್ರೆಗೆ ಕರೆದೊಯ್ದಾಗ, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.
ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮಹಿಳೆಯನ್ನು ಆಕೆಯ ಮಗ ರಿಂಕು ಡಿಯೋಲ್ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ರಿಂಕು ಮಾನಸಿಕ ಅಸ್ವಸ್ಥ ಎಂದು ಸಂಬಂಧಿಕರು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net