ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತಕ್ಕೀಡಾಗಿ ಸಾವು!

Mother Son
Published on

ಶಿವಮೊಗ್ಗ: ಅತ್ಯಾಪ್ತರ ಅಗಲಿಕೆಯನ್ನು ಸಹಿಸಲಾಗದೆ ಇನ್ನೊಬ್ಬರೂ ಸಾವಿಗೀಡಾದ ಪ್ರಕರಣಗಳು ಹಲವು ಸಂಭವಿಸಿವೆ. ಅಂಥ ದುರಂತ ಸಾವುಗಳ ಪಟ್ಟಿಗೆ ಇನ್ನೊಂದು ಪ್ರಕರಣ ಸೇರಿದೆ. ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ಈ ಪ್ರಕರಣ ನಡೆದಿದೆ. ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ (58) ಹಾಗೂ ಆತನ ತಾಯಿ ಚಿನ್ನಮ್ಮ (78) ಸಾವಿಗೀಡಾದವರು.

ಚಿನ್ನಮ್ಮ ಶನಿವಾರ ಮೃತಪಟ್ಟಿದ್ದು, ತಿಮ್ಮಪ್ಪ ಅವರ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಅಲ್ಲಿಂದ ಮನೆಗೆ ಮರಳಿದ ಅರ್ಧ ಗಂಟೆಯೊಳಗೆ ಹೃದಯಾಘಾತಕ್ಕೀಡಾದ ಅವರು ಮೃತಪಟ್ಟಿದ್ದರು. ತಿಮ್ಮಪ್ಪ ಪತ್ನಿ-ಪುತ್ರರನ್ನು ಅಗಲಿದ್ದು, ಒಂದರ ಹಿಂದೊಂದರಂತೆ ಸಂಭವಿಸಿದ ಸಾವಿನ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net