ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ: ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದ ಘಟನೆ

Mother and Son
Published on

ಹಾವೇರಿ: ತಾಯಿ ಮತ್ತು ಮಗ ಸಾವಿನಲ್ಲೂ ಒಂದಾದ ಘಟನೆ ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ತಾಯಿ ಎಲ್ಲವ್ವ ತಿಮ್ಮನಹಳ್ಳಿ (80) ಹಾಗೂ ಮಗ ಷಣ್ಮುಖಪ್ಪ ತಿಮ್ಮನಹಳ್ಳಿ (45) ಎಂದು ಗುರುತಿಸಲಾಗಿದೆ. ಎಲ್ಲವ್ವ ಬೆಳಿಗ್ಗೆ ಹತ್ತೂವರೆ ಗಂಟೆಗೆ ವಯೋಸಹಜವಾಗಿ ಮೃತಪಟ್ಟರು. ಮೃತ ಎಲ್ಲವ್ವಳಿಗೆ ಒಟ್ಟು ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಎಲ್ಲವ್ವ ಕಿರಿಯ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಎಲ್ಲವ್ವ ಮೃತಪಡುತ್ತಿದ್ದಂತೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಎರಡನೆಯ ಪುತ್ರ ಷಣ್ಮುಖಪ್ಪನಿಗೆ ವಿಷಯ ತಿಳಿಸಲು ಮನೆಯವರು ಹೋಗಿದ್ದಾರೆ. ಆದರೆ, ಷಣ್ಮುಖಪ್ಪ ಮಲಗಿದಲ್ಲೇ ಮೃತಪಟ್ಟಿದ್ದ.

ಬಳಿಕ ಕುಟುಂಬಸ್ಥರು ಹಾಗೂ ಗ್ರಾಮದ ಜನರು ಸಾವಿನಲ್ಲಿ ಒಂದಾದ ತಾಯಿ ಮತ್ತು ಮಗನ ಮೃತದೇಹಗಳನ್ನು ಒಂದೆ ಕಡೆ ಕೂರಿಸಿ, ಪೂಜೆ ಸಲ್ಲಿಸಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net