ಪತಿಯ ಅಂತ್ಯಕ್ರಿಯೆ ಸಂದರ್ಭ ಪತ್ನಿಗೆ ಹೃದಯಾಘಾತ; ಒಂದೇ ದಿನ ದಂಪತಿಯ ಸಾವು..

Death
Published on

ಹುಬ್ಬಳ್ಳಿ: ಪ್ರೀತಿಪಾತ್ರರ ಅಗಲಿಕೆಯನ್ನು ತಾಳಲಾಗದೆ ಇನ್ನೊಬ್ಬರೂ ಸಾವಿಗೀಡಾದ ಪ್ರಕರಣಗಳು ಹಲವಾರು ನಡೆದಿವೆ. ಅಂಥ ದುರಂತ ಸಾವುಗಳ ಪಟ್ಟಿಗೆ ಇಂದು ಇನ್ನೊಂದು ಪ್ರಕರಣ ಸೇರಿದೆ. ಈ ಪ್ರಕರಣದಲ್ಲಿ ಒಂದೇ ದಿನ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ಈ ಜೋಡಿ ಸಾವು ಸಂಭವಿಸಿದೆ. ಪ್ರಗತಿಪರ ರೈತ ಶಿವಪುತ್ರಪ್ಪ ನೆಲಗುಡ್ಡ (90) ಹಾಗೂ ಅವರ ಪತ್ನಿ ಬಸಮ್ಮ (86) ಒಬ್ಬರ ಹಿಂದೊಬ್ಬರಂತೆ ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಇಂದು ಬೆಳಗ್ಗೆ ಮೃತಪಟ್ಟಿದ್ದರು.

ನಂತರ ಅವರ ಅಂತ್ಯಕ್ರಿಯೆ ನಡೆಯುವ ಸಮಯದಲ್ಲಿ ಪತ್ನಿ ಬಸಮ್ಮ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದರು. ಆಮೇಲೆ ಪತಿಯ ಪಕ್ಕವೇ ಪತ್ನಿಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ದಂಪತಿಯ ಈ ಥರದ ಸಾವಿಗೆ ಮರುಗಿದ ಗ್ರಾಮಸ್ಥರು ಸಂತಾಪ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net