ಯುವತಿಯ ಬಾಡಿ ಶೇಪ್ ಬಗ್ಗೆ ಅಶ್ಲೀಲ ಮಾತು: ಪ್ರಶ್ನಿಸಿದ ಯುವಕನ ಮೇಲೆ ಬಾಟಲ್​ನಿಂದ ಹಲ್ಲೆ

BNG Pub Girl
Published on

ಬೆಂಗಳೂರು: ಯುವತಿಯ ಬಟ್ಟೆ ಹಾಗೂ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಪ್ರಶ್ನೆ ಮಾಡಿದ್ದಕ್ಕೆ ಆಕೆಯ ಜತೆಗೆ ಬಂದಿದ್ದ ಯುವಕನ ಮೇಲೆ ಪುಂಡರ ಗ್ಯಾಂಗ್​ ಹಲ್ಲೆ ಮಾಡಿರುವ ಘಟನೆ ಕೊತ್ತನೂರು ಬಳಿಯಿರುವ ಒಯಾ ಪಬ್​​ನಲ್ಲಿ ನಡೆದಿದೆ.

ತಿಲಕ್ ಹಲ್ಲೆಗೊಳಗಾದ ಯುವಕ. ಸಂಬಂಧಿ ಯುವತಿ ಸಂಧ್ಯಾ ಕುಮಾರ್ ಜತೆ ತಿಲಕ್​ ಒಯಾ ಪಬ್​ಗೆ ಭೇಟಿ ನೀಡಿದ್ದ. ಈ ವೇಳೆ ಯುವತಿಯ ಬಾಡಿ ಶೇಪ್ ಬಗ್ಗೆ ಕೇರಳ ಮೂಲದ ಯುವಕರ ಗ್ಯಾಂಗ್​ ಅಶ್ಲೀಲವಾಗಿ ಮಾತನಾಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಭ್ಧಗಳಿಂದ ನಿಂದಿಸಿ, ಬಿಯರ್ ಬಾಟಲ್​ನಿಂದ ಗ್ಯಾಂಗ್​ ಹಲ್ಲೆ ಮಾಡಿದೆ.

ರಾಜು, ಹರಿಕೃಷ್ಣ ಹಾಗೂ ಅಜಯ್ ಎಂಬುವರು ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ವಿನಾಕಾರಣ ಎಳೆದಾಡಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 323, 324, 354, 504, 506ರ ಅಡಿಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net