More

    ಸೂರ್ಯನ ಕಿರಣದಿಂದಾಗಿ ಚರ್ಮ ಕಪ್ಪಾಗಿದ್ದರೆ ಈ ಮನೆ ಮದ್ದು ಬಳಸಿ ತ್ವಚೆಯನ್ನು ಕಾಪಾಡಿ.

    ಬೆಂಗಳೂರು: ಸೂರ್ಯನ ಕಿರಣಗಳಿಂದಾಗಿ ನಮ್ಮೆಲ್ಲರ ತ್ವಚೆ ಕಪ್ಪಾಗುವುದು ಸಹಜ. ಹೀಗೆ ಹಾಳಾದ ತ್ವಚೆಯನ್ನು ಸರಿಪಡಿಸಬೇಕೆಂದರೆ ಹೆಚ್ಚು ಸಮಯ ಬೇಕಾಗುವುದು. ಇಂತಹ ಸಮಸ್ಯೆಯಿಂದ ಪಾರಾಗಬೇಕು ಅಥವಾ ನಿವಾರಿಸಬೇಕು ಎಂದರೆ ಕೆಲವು ಮನೆಮದ್ದಿನ ಆರೈಕೆ ಮಾಡಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

    ಹಸಿ ಹಾಲನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ. ಹತ್ತಿ ಉಂಡೆಯನ್ನು ಮಾಡಿ ಹಸಿ ಹಾಲಿನಲ್ಲಿ ನೆನೆಸಿ ಮತ್ತು ಅದನ್ನು ನಿಮ್ಮ ಕೈ ಮತ್ತು ಪಾದಗಳಿಗೆ ಹಚ್ಚಿ. ಇದು ಚರ್ಮದಲ್ಲಿರುವ ಕೊಳೆಯನ್ನು ಸಂಗ್ರಹಿಸುತ್ತದೆ. 15 ನಿಮಿಷಗಳ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

    ಇದನ್ನೂ ಓದಿ: ಹಳೆಯ ಹಾಡುಗಳಿಗೆ ಹೊಸ ರೂಪ; ಅನಂತ ರಾಜನ್ ಅವರಿಂದ ರಾಜನ್ – ನಾಗೇಂದ್ರ ಗಾನಯಾನ

    ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಹಾಲಿನ ಪುಡಿಯನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಿಮ್ಮ ಕೈ ಮತ್ತು ಪಾದಗಳಿಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಬಹುದಾಗಿದೆ. ಇದು ಸತ್ತ ಚರ್ಮಕೋಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

    ರೋಸ್ ವಾಟರ್ ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಎರಡು ಚಮಚ ಗ್ಲಿಸರಿನ್ ಮತ್ತು ಎರಡು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ, ಇದರಿಂದ ತ್ವಚೆಗೆ ಚೆನ್ನಾಗಿ ಮಸಾಜ್​ ಮಾಡಬೇಕು. ಇದು ಚರ್ಮಕ್ಕೆ ಕಾಂತಿ ಸಿಗುವಂತೆ ಮಾಡುತ್ತದೆ. 

    ಇದನ್ನೂ ಓದಿ: ಪುಷ್ಟ-2 ಚಿತ್ರತಂಡ ಪ್ರಯಾಣಿಸುತ್ತಿದ್ದ ಬಸ್​ ಅಪಘಾತ; ಹಲವರಿಗೆ ಗಂಭೀರ ಗಾಯ

    ಅಲೋವೆರಾ ಜೆಲ್ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ ನಂತರ ಅದನ್ನು ನಿಮ್ಮ ಕೈ ಮತ್ತು ಪಾದಗಳಿಗೆ ಲೇಪಿಸಿ ಕನಿಷ್ಠ 40 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಬಹುದಾಗಿದೆ. ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ನಿಮ್ಮ ಕೈ ಮತ್ತು ಪಾದಗಳಿಗೆ ಲೇಪಿಸಿ 20 ನಿಮಿಷಗಳ ಕಾಲ ಬಳಿಕ ತಣ್ಣೀರಿನಿಂದ ತೊಳೆಯಬಹುದಾಗಿದೆ. ಈ ಮನೆಮದ್ದುಗಳನ್ನು ತಪ್ಪದೇ ಪಾಲಿಸುವುದರಿಂದ ಚರ್ಮಕ್ಕೆ ಕಾಂತಿ ಸಿಗುತ್ತದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts