More

    ಅನುಚಿತ ಸ್ಪರ್ಶ, ಲೈಂಗಿಕತೆಗೆ ಒತ್ತಾಯ: WFI ಅಧ್ಯಕ್ಷರ ವಿರುದ್ಧ ದಾಖಲಾಗಿರೋ 2 FIR​, 10 ದೂರುಗಳ ವಿವರ ಇಲ್ಲಿದೆ…

    ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೆಹಲಿ ಪೊಲಿಸರು ಎರಡು ಎಫ್​ಐಆರ್​ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ.

    ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಎರಡು ಎಫ್​ಐಆರ್​ ಪ್ರಕಾರ, ಲೈಂಗಿಕ ಬಯಕೆ ಈಡೇರಿಸಲು ಮಹಿಳಾ ಕುಸ್ತಿಪಟುಗಳನ್ನು ಒತ್ತಾಯಿಸಿದ ಆರೋಪ ಡಬ್ಲ್ಯುಎಫ್​ಐ ಮುಖ್ಯಸ್ಥರ ಮೇಲಿದೆ. ಇದಲ್ಲದೆ, ಲೈಂಗಿಕ ಶೋಷಣೆ ಸಂಬಂಧ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ 10 ದೂರುಗಳು ದಾಖಲಾಗಿವೆ.

    ಇದನ್ನೂ ಓದಿ: ನ್ಯಾಯಕ್ಕಾಗಿ ರಾತ್ರಿ 1 ಗಂಟೆವರೆಗೂ ಮಗು ಜತೆ ಕುದುರೆಮುಖ ಪೊಲೀಸ್​ ಠಾಣೆಯಲ್ಲೇ ಕುಳಿತ ಮಹಿಳೆ!

    ಲೈಂಗಿಕ ಬಯಕೆಗೆ ಒತ್ತಾಯ

    ಉಸಿರಾಟವನ್ನು ಪರಿಶೀಲಿಸುವುದಾಗಿ ಹೇಳಿ ಮಹಿಳಾ ಕುಸ್ತಿಪಟುಗಳ ಎದೆಯನ್ನು ಅನುಚಿತವಾಗಿ ಸ್ಪರ್ಶಿಸುವುದು, ಅಂಗಾಗಗಳನ್ನು ಮುಟ್ಟುವುದು ಮತ್ತು ಖಾಸಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಲೈಂಗಿಕ ಬಯಕೆಗೆ ಒತ್ತಾಯ ಮಾಡುವುದು ಸೇರಿ ಅನೇಕ ಆರೋಪಗಳು ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಕೇಳಿಬಂದಿವೆ. 10 ದೂರುಗಳು ಏಪ್ರಿಲ್​ 21ರಂದು ದಾಖಲಾಗಿದ್ದರೆ, ಎರಡು ಎಫ್​ಐಆರ್​ ಏಪ್ರಿಲ್​ 28ರಂದು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    3 ವರ್ಷ ಜೈಲು ಶಿಕ್ಷೆ

    ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿ ಎರಡು ಎಫ್​ಐಆರ್​ ದಾಖಲಾಗಿದ್ದು, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮೊದಲ ಎಫ್​ಐಆರ್​ನಲ್ಲಿ ಆರು ಒಲಿಂಪಿಯನ್​ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್​ಐಆರ್​ ಅಪ್ರಾಪ್ತ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ.

    ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡರು ಮತ್ತು ನನ್ನ ಭುಜವನ್ನು ಒತ್ತಿದರು. ಉದ್ದೇಶಪೂರ್ವಕವಾಗಿ ಅನುಚಿತವಾಗಿ ಸ್ಪರ್ಶಿಸಿದರು ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಕುಸ್ತಿಪಟುಗಳು ದೂರುಗಳೇನು?

    ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಡಬ್ಲ್ಯುಎಫ್‌ಐ ತರಬೇತುದಾರ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ದೂರುದಾರರೊಬ್ಬರು ಆರೋಪಿಸಿದ್ದಾರೆ. ಅಲ್ಲದೆ, ಬ್ರಿಜ್​ ಭೂಷಣ್​ ಸಿಂಗ್ ಅವರು ನನ್ನ ಭುಜಗಳು, ಮೊಣಕಾಲುಗಳು ಮತ್ತು ಅಂಗೈ ಅನ್ನು ದುರುದ್ದೇಶದಿಂದ ಮುಟ್ಟಿದರು. ಉಸಿರಾಟವನ್ನು ಪರಿಶೀಲಿಸುವ ನೆಪದಲ್ಲಿ ಎದೆ ಮತ್ತು ಹೊಟ್ಟೆಯನ್ನು ಸ್ಪರ್ಶಿಸಿದರು ಎಂದು ದೂರುದಾರೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಇದನ್ನೂ ಓದಿ: ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಬಸ್​ ಪ್ರಯಾಣ: ಪುರುಷರಿಗೆ ಶುರುವಾಯ್ತು ಹೊಸ ಟೆನ್ಶನ್​

    ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಮತ್ತೊಂದು ದೂರಿನಲ್ಲಿ, ಕುಸ್ತಿಪಟುವಿನ ಟೀ ಶರ್ಟ್​ ತೆಗೆದು, ಆಕೆಯ ಎದೆಯ ಮೇಲೆ ಕೈಇಟ್ಟ ಆರೋಪವಿದೆ. ಬಲವಂತವಾಗಿ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು ಎಂದು ದೂರಲಾಗಿದೆ. ಎಳೆದು ತಬ್ಬಿಕೊಂಡು ಹಣದ ಆಮಿಷವೊಡ್ಡಿ ಲೈಂಗಿಕ ಬಯಕೆ ಈಡೇರಿಸಲು ಒತ್ತಾಯಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಉಸಿರಾಟದ ಮಾದರಿಯನ್ನು ಪರೀಕ್ಷಿಸುವುದಾಗಿ ಹೇಳಿ ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಮತ್ತೊಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಲಿನಲ್ಲಿ ನಿಂತಿದ್ದಾಗ ಅನುಚಿತವಾಗಿ ಸ್ಪರ್ಶಿಸಿದರು. ಅಂಗಾಂಗಳನ್ನು ಮುಟ್ಟಿದರು ಎಂದು ಇನ್ನೊಂದು ದೂರಿನಲ್ಲಿ ಆರೋಪಿಸಲಾಗಿದೆ.

    ನೇಣು ಬಿಗಿದುಕೊಳ್ಳುತ್ತೇನೆ

    ಆದರೆ ತನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ನಿರಾಕರಿಸಿದ್ದಾರೆ. ಬುಧವಾರ (ಮೇ 31) ಅವರು ಮತ್ತೊಮ್ಮೆ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದರು. ನನ್ನ ವಿರುದ್ಧ ಒಂದೇ ಒಂದು ಆರೋಪಗಳು ಸಾಬೀತಾದರೆ, ನಾನು ನೇಣು ಬಿಗಿದುಕೊಳ್ಳುತ್ತೇನೆ. ನಿಮ್ಮ ಬಳಿ ಯಾವುದೇ ಸಾಕ್ಷಿಗಳಿದ್ದರೆ ಅವುಗಳನ್ನು ಕೋರ್ಟ್​ಗೆ ಸಲ್ಲಿಸಿ, ನಾನು ಯಾವುದೇ ಶಿಕ್ಷೆಗೂ ಸಿದ್ಧ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು

    ಇತ್ತ ಕುಸ್ತಿಪಟುಗಳು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದು, ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಜಂತರ್​ ಮಂತರ್​ ಹೊರತುಪಡಿಸಿ ಕುಸ್ತಿಪಟುಗಳು ಬೇರೆಡೆ ಪ್ರತಿಭಟಿಸಲಿ: ದೆಹಲಿ ಪೊಲೀಸ್​

    ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆಗೆ ಯತ್ನ; ಕುಸ್ತಿಪಟುಗಳು ಪೊಲೀಸ್​ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts