

ನವದೆಹಲಿ: 'ದೇಶ ಸುತ್ತಿ ನೋಡು ಕೋಶ ಓದಿ ನೋಡು' ಎಂಬ ಗಾದೆಯಂತೆ ಇಲ್ಲೊಬ್ಬ ಯುವಕ ತನ್ನ ಪ್ರೀತಿಯ ಶ್ವಾನದೊಂದಿಗೆ ಇಲ್ಲಿಯವರೆಗೂ ಭಾರತದದ್ಯಾಂತ ಬರೊಬ್ಬರಿ 13 ಸಾವಿರ ಕಿ.ಮೀ ಕಾಲು ನಡಿಗೆಯಲ್ಲಿ ಪ್ರಯಾಣವನ್ನು ಕ್ರಮಿಸಿದ್ದಾನೆ.
ಹೌದು, ಒಬ್ಬಂಟಿಯಾಗಿ ದೇಶ ಸುತ್ತಲೂ ಯಾರಿಗೆ ಇಷ್ಟ ಇಲ್ಲ ಹೇಳಿ. ಅದೇ ತರ ಯತಿಗೌರ್ ಎಂಬ ಯುವಕ ದೇಶದಲ್ಲಿ ವಿವಿಧ ಸ್ಥಳಗಳನ್ನು ಸುತ್ತುವ ಮೂಲಕ ವಿಭಿನ್ನ ಜನರ, ಸಂಸ್ಕೃತಿ ಮತ್ತು ದೇವಸ್ಥಾನಗಳನ್ನು ದರ್ಶಿಸಿ ತನ್ನನ್ನು ತಾನು ಕಂಡುಕೊಂಡುತ್ತಿದ್ದಾನೆ. 2022ರಲ್ಲಿ ಯತಿ ತನ್ನ ಶ್ವಾನದೊಂದಿಗೆ ಉತ್ತರಾಖಂಡದಿಂದ ನಡಿಗೆಯ ಪ್ರಯಾಣ ಆರಂಭಿಸಿದ್ದಾನೆ. ಬೈಸಿಕಲ್ನಲ್ಲಿ ಪ್ರಯಾಣ ಮಾಡಿದರೆ ದಿನಕ್ಕೆ 55 ಕಿ.ಮೀ ಕ್ರಮಿಸಬಹುದು. ಆದರೆ, ಕಾಲು ನಡೆಗೆಯಲ್ಲಿ ನಾನು ಪ್ರತಿದಿನ 25 ಕಿ.ಮೀ ನಡೆಯುತ್ತೇನೆ. ಇದರಿಂದ ಸಮಯ ಉಳಿತಾಯದ ಜತೆಗೆ ಮತ್ತೊಂದು ಪ್ರಯಾಣ ಬೆಳೆಸಲು ಅಯಾಸವಾಗುವುದಿಲ್ಲ ಎನ್ನುತ್ತಿದ್ದಾರೆ.
ಇನ್ನು ಯತಿಗೌರ್ ಹೇಳುವ ಪ್ರಕಾರ, ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನಾವು ಕಾಲು ನಡೆಯಲ್ಲಿ ಪ್ರಯಾಣ ಮಾಡುವುದೇ ಉತ್ತಮ ಇದರಿಂದ ನಮ್ಮ ಪುರ್ವಜರ ನೆಲೆಗಳು ಸಂಸ್ಕೃತಿಗಳು ಕಾಣಸಿಗುತ್ತವೆ ಎಂದಿದ್ದಾರೆ. ಇನ್ನು ನಾನು ಚಾರ್ದಾಮ್- ಬದರಿನಾಥ್- ಕೇಥರನಾಥ್-ಪುರಿ ಮತ್ತು ರಾಮೇಶ್ವರಂ ಸೇರಿದಂತೆ 12 ಜ್ಯೋತಿರ್ಲಿಂಗಗಳು ಪ್ರವಾಸ ಒಳಗೊಂಡಿದ್ದಾನೆ. ಆದರೆ, ನಾನು ಸಾಧು ಅಲ್ಲ ಎಂದು ವಿಡಿಯೋದಲ್ಲಿ ಮುಗಳ್ನಗುತ್ತಾರೆ.
ಯತಿಯು ತನ್ನ ಸಂಚಾರದ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರ ಕಥೆಗಳನ್ನು ಹಂಚಿಕೊಂಡಿದ್ದಾರೆ. ತಾವು ಪದವಿ ಪಡೆದ ನಂತರ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಇದರಿಂದ ಟ್ರಾವೆಲ್ ಮಾಡಲು ಸಮಯ, ದುಡ್ಡಿನ ಹೊಂದಾಣಿಕೆ ಹೇಗೆ ಮಾಡಬೇಕು ಎಂದು ಹೇಳುತ್ತಿರುತ್ತಾನೆ. ಅಲ್ಲದೆ, ಯತಿಯು ತನ್ನ ಮೊದಲ ಪ್ರಯಾಣ ಆರಂಭಿಸಿದಾಗ ತಮ್ಮ ತಂದೆ-ತಾಯಿಯೇ ಅರ್ಥಿಕ ಸಹಾಯ ಮಾಡಿದ್ದಾರೆ. ಬಳಿಕ ತನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದಿಷ್ಟು ಹಣ ಬರುತ್ತದೆ. ಅದರಿಂದಲೇ ನನ್ನ ದಿನ ನಿತ್ಯದ ಬದುಕು ಎಂದು ಹೇಳುತ್ತಾರೆ.
ಯತಿಯು ತನಗೆ ಮತ್ತು ಶ್ವಾನಕ್ಕೆ ಪ್ರತಿನಿತ್ಯದ ಊಟ,ವಸತಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಇದು ಅಂದುಕೊಂಡಷ್ಟು ಸುಲಭ ಅಲ್ಲ. ದಾರಿಯಲ್ಲಿ ಯಾರು ನಮ್ಮನ್ನು ಸ್ವಾಗತಿಸಿ ಊಟ ಹಾಕಿ ಮಲಗಲು ಜಾಗ ಕೊಡುತ್ತಾರೆಯೇ ಅವರೇ ನಮ್ಮ ಬಂಧುಗಳು ಎಂದು ಯತಿ ಹೇಳುತ್ತಾರೆ. ಕೆಲಬಾರಿ ಮಠ, ಮಂದಿರ ಮತ್ತು ದೇವಸ್ಥಾನಗಳಲ್ಲಿ ಮಲಗಿ ಮರುದಿನ ಮತ್ತೊಂದು ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ತನ್ನ ಶ್ವಾನ ಕೂಡ ಯುತಿಯೊಂದಿಗೆ ಹಿಂಬಾಲಿಸುತ್ತದೆ. (ಏಜೆನ್ಸೀಸ್).