ಟ್ವಿಟರ್​ನಲ್ಲೇ 'ಟ್ವಿಟರ್​ಡೌನ್' ಟಾಪ್ ಟ್ರೆಂಡಿಂಗ್!; ಟ್ವೀಟ್ ಮಾಡಲಾಗದೆ ಪರದಾಡಿದ ಟ್ವೀಟಿಗರು..

Twitter Down F
Published on

ಬೆಂಗಳೂರು: ಸೋಷಿಯಲ್ ಮೀಡಿಯಾ ದಿಗ್ಗಜ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಟ್ವಿಟರ್​ ಇಂದು ರಾತ್ರಿಯ ಸುಮಾರಿಗೆ ತಾಂತ್ರಿಕ ಅಡಚಣೆ ಎದುರಿಸಿದ್ದು, ಬಳಕೆದಾರರು ಟ್ವೀಟ್​ ಮಾಡಲು ಪರದಾಡಿದ ಪ್ರಸಂಗ ನಡೆದಿದೆ.

ಭಾರತದ ಬಹಳಷ್ಟು ಗ್ರಾಹಕರಿಗೆ ಟ್ವಿಟರ್​ ಬಳಕೆಯಲ್ಲಿ ಸಮಸ್ಯೆ ಎದುರಾಗಿದ್ದು, ಟ್ವಿಟರ್​ನಲ್ಲೇ ಟ್ವಿಟರ್​ಡೌನ್ ಎಂಬುದು ಟಾಪ್ ಟ್ರೆಂಡಿಂಗ್ ಆಗಿದೆ. #TwitterDown ಹ್ಯಾಷ್​ಟಾಗ್ ಜತೆ 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದು, ಅದು ಟಾಪ್ ಟ್ರೆಂಡಿಂಗ್ ಆಗಿದೆ.

ಹಲವರು ಆರಂಭದಲ್ಲಿ ತಮ್ಮ ಹ್ಯಾಂಡಲ್​ನಲ್ಲೇ ಏನೋ ಸಮಸ್ಯೆ ಇದೆ ಎಂದುಕೊಂಡು ಪರೀಕ್ಷಿಸಿದ್ದು, ಬಳಿಕ ಟ್ವಿಟರ್​ನಲ್ಲೇ ಸಮಸ್ಯೆ ಇದೆ ಎಂದು ತಿಳಿಯಿತು ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ.

ಸದ್ಯ ನನ್ನ ಟ್ವಿಟರ್​ ಖಾತೆ ಬ್ಲಾಕ್ ಆಗಿಲ್ಲ, ಇದು ಟ್ವಿಟರ್​​ನದ್ದೇ ಸಮಸ್ಯೆ ಎಂದು ಕೆಲವರು ತಮಾಷೆಯಾಗಿ ಹೇಳಿಕೊಂಡು ನಿರಾಳರಾಗಿದ್ದಾರೆ. ಯಾರಾದರೂ ಎಲಾನ್​ ಮಸ್ಕ್​ನನ್ನು ಎಬ್ಬಿಸಿ, 44 ಬಿಲಿಯನ್ ಡಾಲರ್ ಆ್ಯಪ್ ಕೆಲಸ ಮಾಡುತ್ತಿಲ್ಲ ಎಂದು ಆತನಿಗೆ ಹೇಳಿ ಎಂದೂ ಕೆಲವರು ಮಸ್ಕ್ ಕಾಲೆಳೆಯುವಂಥ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net