ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕಮಲ್​​ ಕೌರ್​ ಕೊಲೆ!: ಕಾರಿನಲ್ಲಿ ಮೃತ ದೇಹ ಪತ್ತೆ | Murdered

dk - 2025-06-12T130647.032
Published on

Murdered: ಪಂಜಾಬ್​ನ ಬಟಿಂಡಾದ ಅದೇಶ್​​ ವೈದ್ಯಕೀಯ ವಿಶ್ವವಿದ್ಯಾಲಯದ ಬಳಿ ನಿಲ್ಲಿಸಿದ್ದ ಕಾರ್​ವೊಂದರಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿ(Social Media Influencer) ಕಮಲ್​​ ಕೌರ್​ ಮೃತ ದೇಹ ಗುರುವಾರ ಪತ್ತೆಯಾಗಿದೆ ಎಂದು ಗುರುವಾರ ತಿಳಿಸಿದ್ದಾರೆ.

ಪತ್ತೆಯಾದ ನಂತರ ಪಂಜಾಬ್ ಪೊಲೀಸರು ಕೊಲೆ ತನಿಖೆಯನ್ನು ಆರಂಭಿಸಿದ್ದಾರೆ. ಇನ್​ಸ್ಟ್ರಾಮ್​​ನಲ್ಲಿ 3.83 ಲಕ್ಷ ಪಾಲೋವರ್ಸ್​​ ಹೊಂದಿರುವ ಲುಧಿಯಾನ ನಿವಾಸಿ ಕೌರ್​, ನಿಯಮಿತ ರೀಲ್​​ಗಳನ್ನು ಪೋಸ್ಟ್​ ಮಾಡುವುದಕ್ಕೆ ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ ಕೆಲ ವಿವಾದಗಳ ಮೂಲಕ ಕೂಡ ಈಕೆ ಗಮನ ಸೆಳೆದಿದ್ದಳು.

ಆಕೆಯನ್ನು ಬೇರೆ ಕಡೆ ಕೊಂದು ಇಲ್ಲಿನ ಅದೇಶ್​​ ವೈದ್ಯಕೀಯ ವಿಶ್ವವಿದ್ಯಾಲಯದ ಬಳಿ ನಿಲ್ಲಿಸಿದ್ದ ನೋಂದಯಿತ ಕಾರಿನ ಡಿಕ್ಕಿ ಇಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಳಕಿಗೆ ಬಂದಿದ್ದೇಗೆ..?

ಕಾರಿನಿಂದ ಕೆಟ್ಟ ವಾಸನೆ ಬುರುತ್ತಿರುವುದನ್ನು ಗಮನಿಸಿದ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಬಂದು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದಾರೆ.

ಮೇಲ್ನೋಟಕ್ಕೆ ಅನುಮಾನಸ್ಪದ ಕಂಡು ಬಂದ ಹಿನ್ನೆಲೆ ಕೊಲೆ ಆರೋಪದಡಿಯಲ್ಲಿ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದು, ಕೇಸ್​ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net