Alia Bhatt : ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮದ್ವೆಯಾಗಿ ಹಲವು ವರ್ಷಗಳ ನಂತರ ತಮ್ಮ ಹೆಸರಿನ ಮುಂದೆ ಇರುವ ಭಟ್ ಎನ್ನುವ ಸರ್ ನೇಮ್ ತೆಗೆದು ಆಲಿಯಾ ಕಪೂರ್ ಎಂದು ಬದಲಿಸಿಕೊಂಡಿದ್ದಾರೆ.
ಆಲಿಯಾ ಭಟ್ ಅವರು ವ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್’ ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಆಲಿಯಾ ಕಪೂರ್ ಕುಟುಂಬದವರನ್ನು ವಿವಾಹ ಆಗಿದ್ದಾರೆ. ಈ ಕಾರಣದಿಂದಲೇ ಆಲಿಯಾ ಕಪೂರ್ ಎಂದು ಹೋಟೆಲ್ನವರು ಬದಲಿಸಿರಬಹುದು ಎಂಬುದು ಕೆಲವರ ಊಹೆ. ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.
ಆಲಿಯಾ ಕಪೂರ್ ಎಂದು ಕರೆಯಲು ಮನಸ್ಸೇ ಬರುತ್ತಿಲ್ಲ. ದಯವಿಟ್ಟು ಆಲಿಯಾ ಭಟ್ ಎಂದೇ ಇಟ್ಟುಕೊಳ್ಳಿ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇದು ಹೋಟೆಲ್ನವರ ತಪ್ಪಿರಬಹುದು ಎಂದು ಊಹಿಸಿದ್ದಾರೆ.
TAGGED:alia bhatt