

Marriage: ಮಹಿಳೆಯೊಬ್ಬಳು ತಮ್ಮ ವಿವಾಹವಾದ ಕೇವಲ 15 ದಿನಗಳ ನಂತರ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬುಧವಾರ (ಜೂ.11) ನಡೆದಿದೆ.
ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ 29 ವರ್ಷದ ರಾಧಿಕಾ ಲೋಖಂಡೆ ಆಕೆಯ ಪತಿಯಾದ 50 ವರ್ಷದ ಅನಿಲ್ ಲೋಖಂಡೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ರಾಧಿಕಾ ತನ್ನ ಸೋದರಸಂಬಂಧಿಗೆ ಕೊಲೆಯ ಬಗ್ಗೆ ತಿಳಿಸಿದ್ದಾಳೆ. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ದಂಪತಿಗಳು ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ತಹಸಿಲ್ನಲ್ಲಿ ವಾಸಿಸುತ್ತಿದ್ದರು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)