ಹೈದರಾಬಾದ್: ಅಕ್ರಮ ಆಸ್ತಿ (ಡಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರನ್ನು(Govt Official) ಬುಧವಾರ ರಾತ್ರಿ ಬಂಧಿಸಿದೆ.
ಕರೀಂನಗರ ಜಿಲ್ಲೆಯ ಎಸ್‌ಆರ್‌ಎಸ್‌ಪಿ ಕ್ಯಾಂಪ್‌ನ ವಿಭಾಗ ಸಂಖ್ಯೆ -8 ರ ನೀರಾವರಿ ಮತ್ತು ಕಮಾಂಡ್ ಏರಿಯಾ ಅಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ಶ್ರೀಧರ್ ಬಂಧಿತ. ಆಕ್ರಮ ಮೂಲಕ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
3 ಫ್ಲಾಟ್, 19 ವಸತಿ ಗೃಹ ಹಾಗೂ ಹೋಟೆಲ್ ಉದ್ಯಮ ಪಾಲು!
ಶ್ರೀಧರ್ ಹೈದರಾಬಾದ್ ಬಳಿಯ ತೆಲ್ಲಾಪುರದಲ್ಲಿ ಒಂದು ವಿಲ್ಲಾ, ವಾರಂಗಲ್, ಕರಿಮಾನಗರ ಮತ್ತು ಹೈದರಾಬಾದ್‌ನಲ್ಲಿ ಕನಿಷ್ಠ ಮೂರು ಸ್ವತಂತ್ರ ಕಟ್ಟಡಗಳು, ಮೂರು ನಗರಗಳಲ್ಲಿ 19 ಪ್ರಮುಖ ವಸತಿ ಪ್ಲಾಟ್‌ಗಳು, 16 ಎಕರೆ ಕೃಷಿ ಭೂಮಿ ಮತ್ತು ಕರಿಮ್‌ನಗರದ ಬಹು ಹೋಟೆಲ್‌ಗಳಲ್ಲಿ ಹಲವಾರು ಕೋಟಿ ಮೌಲ್ಯದ ಪಾಲನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:10 ಕೆಜಿ ಗಾಂಜಾ ಬೆರೆಸಿದ ಚಾಕೊಲೇಟ್ ಮಾರುತ್ತಿದ್ದ ಇಬ್ಬರು ಅರೆಸ್ಟ್ | Chocolates
ಶ್ರೀಧರ್ ಅವರು ತಮ್ಮ ಮಗನಿಗಾಗಿ ಥೈಲ್ಯಾಂಡ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಅನ್ನು ಆಯೋಜಿಸಿದ್ದಾರೆಂದು ಹೇಳಲಾಗಿದ್ದು, ಎಲ್ಲಾ ವ್ಯವಸ್ಥೆಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಆರೋಪಿ ಅಧಿಕಾರಿ ಈ ಹಿಂದೆ ಕಾಲೇಶ್ವರಂ ಲಿಫ್ಟ್ ನೀರಾವರಿ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಇತನ ವಿರುದ್ಧ ಇದೀಗ ತನಿಖೆ ಮುಂದುವೆರೆದಿದೆ. (ಏಜೆನ್ಸೀಸ್)
A #Disproprtionateassets (DA) Case has been registered against “Nune Sridhar, Executive Engineer, Irrigation & CAD Department, Division No.-8, SRSP Camp, Choppadandi, Karim Nagar” by Telangana #ACB Officials. #ACB Officials conducted searches at his residence and 13 other…
— ACB Telangana (@TelanganaACB) June 11, 2025