ತ್ರಿಕೋನ ಪ್ರೇಮಕಥೆ: ವ್ಯಕ್ತಿಯೊರ್ವನನ್ನು ಕೊಂದು ರೆಫ್ರಿಜರೇಟರ್‌ನಲ್ಲಿ ತುಂಬಿದ ಗ್ಯಾಂಗ್​! ಅಸಲಿಗೆ ನಡೆದಿದ್ದೇನು..? | Love Triangle

dk - 2025-06-12T104322.094
Published on

Love Triangle: ತ್ರಿಪುರಾದ ಧಲೈ ಜಿಲ್ಲೆಯ ಗಂಡಚೆರಾದಲ್ಲಿ ರೆಫ್ರಿಜರೇಟರ್‌ನಲ್ಲಿ ಶವವಾಗಿ ತುಂಬಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ 24 ವರ್ಷದ ವ್ಯಕ್ತಿಯ ಕೊಲೆ ಆರೋಪದ ಮೇಲೆ ಪೊಲೀಸರು ಬುಧವಾರ ವೈದ್ಯ ಮತ್ತು ಅವರ ಪೋಷಕರು ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ. ಈ ಕೃತ್ಯ ಜೂ.8 ರಂದು ರಾತ್ರಿ ಅಗರ್ತಲಾದಲ್ಲಿ ನಡೆದಿದ್ದು, ಮೂರು ದಿನಗಳ ನಂತರ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಅಗರ್ತಲಾ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಸರಿಫುಲ್ ಇಸ್ಲಾಂ(24) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪ್ರಕರಣವೇನು..?

ವೈದ್ಯ ದಿಬಾಕರ್ ಸಹಾ ಎಂಬಾತ ಯುವತಿಯನ್ನು ಪ್ರೀತಿಸುತ್ತಿದ್ದನು. ಅದೇ ಹುಡುಗಿಯನ್ನು ಮೃತ ಸರಿಫುಲ್ ಇಸ್ಲಾಂ ಕೂಡ ಲವ್​​ ಮಾಡುತ್ತಿದ್ದನಂತೆ. ಹೀಗಾಗಿ ಇತನ ಮೇಲೆ ಸೇಡು ಇಟ್ಟಿದ್ದ ದಿಬಾಕರ್ ಸಹಾ ಜತೆ ಅತನ ಮೂವರು ಸಹಚರರು ಅನಿಮೇಶ್ ಯಾದವ್ (21), ನಬನಿತ್ ದಾಸ್ (25) ಮತ್ತು ಜಯದೀಪ್ ದಾಸ್ (20) ಸೇರಿ ಕತ್ತು ಹಿಸುಕಿ ಕೊಲೆ ಮಾಡಿ, ಮೃತ ದೇಹವನ್ನು ಟ್ರಾಲಿ ಬ್ಯಾಗ್​ನಲ್ಲಿ ಇಟ್ಟಿದ್ದಾರೆ.

ದಿಬಾಕರ್ ಸಹಾ ಅವರ ಪಾಲಕರಾದ ದೀಪಕ್ ಸಹಾರ (52) ಮತ್ತು ದೇಬಿಕಾ ಸಹಾರವರು ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಲು ಗಾಂಡಚೆರಾದಿಂದ ಅಗರ್ತಲಾಕ್ಕೆ ವಾಹನದೊಂದಿಗೆ ಬಂದರು ಎಂದು ಆರೋಪಿಸಲಾಗಿದೆ. ಶವವನ್ನು ಗಂಡಚೆರಾಕ್ಕೆ ಸಾಗಿಸುವ ಮೊದಲು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net