Chocolates: ಗಾಂಜಾ ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 10 ಕೆಜಿ ಗಾಂಜಾ ಬೆರೆಸಿದ ಚಾಕೊಲೇಟ್‌ಗಳನ್ನು ಹಯಾತ್‌ನಗರದಲ್ಲಿ ಪೊಲೀಸರು ಬುಧವಾರ (ಜೂ.12) ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಜಿ ಶೇಖರ್ (40) ಮತ್ತು ರಿಷಿ ಶಂಕರ್ ಮಿಶ್ರಾ (39) ಎಂದು ಗುರುತಿಸಲಾಗಿದೆ.
ಇಬ್ಬರೂ ಗಾಂಜಾ ಬೆರೆಸಿದ ಚಾಕೊಲೇಟ್‌ಗಳನ್ನು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಲಾಭ ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)