video/ ಅಪಾಯದಲ್ಲಿದ್ದ ನಾಗರಹಾವನ್ನು ಕಾಪಾಡಿತು ಹಂದಿ-ಕಾಗೆಗಳ ಹಿಂಡು!

Snake and mongoose fight
Published on

ದಾವಣಗೆರೆ: ಹಾವು-ಮುಂಗುಸಿ ಕಾಳಗ ಅಂದ್ರೆ ಎಂತಹವರಿಗೂ ಭಯ! ಅವುಗಳ ಪಕ್ಕಕ್ಕೆ ಹೋಗಲೂ ಹಿಂಜರಿಯುತ್ತಾರೆ. ಅಂತಹದ್ದರಲ್ಲಿ ಮುಂಗುಸಿ ಬಾಯಿಂದ ನಾಗರಹಾವನ್ನು ರಕ್ಷಿಸಿವೆ ಕಾಗೆ ಮತ್ತು ಹಂದಿಗಳ ಹಿಂಡು.

ಅಪಾಯದಲ್ಲಿದ್ದ ನಾಗರಹಾವನ್ನು ಕಾಗೆ ಮತ್ತು ಹಂದಿಗಳು ರಕ್ಷಿಸುವ ಅಪರೂಪದ ದೃಶ್ಯವನ್ನು ಯುವಕನೊಬ್ಬ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಏನೇನಿದೆ ಗೊತ್ತಾ?

ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಹಾವಿನ ಮೇಲೆರಗಿದ ಮುಂಗುಸಿ ಕಾದಾಟ ಶುರು ಮಾಡುತ್ತಿದ್ದಂತೆ ಕಾಗೆಗಳು ಅಲ್ಲಿಗೆ ಬಂದವು. ಅದರ ಬೆನ್ನಲ್ಲೇ ಸ್ಥಳಕ್ಕೆ ಹಂದಿಗಳ ಹಿಂಡು ಕೂಡ ಆಗಮಿಸಿದವು. ನಾಗರಹಾವನ್ನು ಸುತ್ತುವರಿದ ಕಾಗೆ-ಹಂದಿಗಳು ಮುಂಗುಸಿಯನ್ನು ಓಡಿಸಿವೆ.

ಈ ಘಟನೆ ನಡೆದ ನಿಖರ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಕೆಲವರು ದಾವಣಗೆರೆ ತಾಲೂಕಿನ ತುರ್ಚಗಟ್ಟ ಬಳಿ ನಡೆದಿದೆ ಎನ್ನುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net