video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

fire art
Published on

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಬೆಂಕಿಯಲ್ಲಿ ಚಿತ್ರ ಬಿಡಿಸುವ ಮೂಲಕ ರಾಜ್ಯದ ಯುವಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಆ ಪ್ರತಿಭಾವಂತನ ಹೆಸರು ಪರೀಕ್ಷಿತ್​ ನೆಲ್ಯಾಡಿ. ಅಗ್ನಿ ಚಿತ್ರಕಲೆ (ಫೈರ್​ ಆರ್ಟ್​)ಯಲ್ಲಿ ಲೈವ್​ ಮೂಲಕವೇ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಮೂಲಕ ಪರೀಕ್ಷಿತ್​ ಸೈ ಎನಿಸಿಕೊಂಡಿದ್ದಾರೆ. ಬೆಂಕಿ, ಸುಗಂಧ ದ್ರವ್ಯ, ಲಿಂಬೆ ರಸ ಹಾಗೂ ಬ್ರಶ್​ ಬಳಸಿ ಬಿಳಿ ಹಾಳೆಯ ಮೇಲೆ 5 ನಿಮಿಷದಲ್ಲಿ ಚಿತ್ರ ಬಿಡಿಸಿದ್ದ ಅವರಿಗೆ ಎಕ್ಸ್ ಕ್ಲ್ಯೂಸಿವ್​ ವರ್ಲ್ಡ್​ ರೆಕಾರ್ಡ್​ ಸಂಸ್ಥೆ ಮಾನ್ಯತೆ ನೀಡಿದೆ.

ಜಗತ್ತಿನಾದ್ಯಂತ ಪ್ರತಿಭೆಗಳನ್ನು ದಾಖಲಿಸುತ್ತಿರುವ ಎಕ್ಸ್ ಕ್ಲ್ಯೂಸಿವ್​ ವರ್ಲ್ಡ್​ ರೆಕಾರ್ಡ್​ ಸಂಸ್ಥೆ, ಈ ಬಾರಿ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿತ್ತು.

ಸ್ಪರ್ಧಾಳುಗಳು ತಮ್ಮ ಪ್ರತಿಭೆಗಳನ್ನು ಲೈವ್​ ವಿಡಿಯೋ ಮೂಲಕ ಪ್ರಸ್ತುತಪಡಿಸಬೇಕಾಗಿತ್ತು. ಪರೀಕ್ಷಿತ್​ ಅವರ ಕಲಾ ಪ್ರೌಢಿಮೆ ಪರಿಗಣಿಸಿ ಆ.19ರಂದು ವರ್ಲ್ಡ್​ ರೆಕಾರ್ಡ್ ​ಘೋಷಿಸಲಾಗಿದೆ.

ನೆಲ್ಯಾಡಿ ಕೌಕ್ರಾಡಿಯ ಸುಧಾಮಣಿ ಮತ್ತು ಶ್ರೀಧರ್​ ದಂಪತಿ ಪುತ್ರ ಪರೀಕ್ಷಿತ್​ ಪ್ರತಿಭೆಗೆ ಈಗಾಗಲೇ ಹಲವು ಪ್ರಶಸ್ತಿ-ಗೌರವ ಸಂದಿವೆ. ಆ.15ರಂದು ಪೇಪರ್​ ಕಟಿಂಗ್​ ಆರ್ಟಿಸ್ಟ್​ ಎಕ್ಸ್ ಕ್ಲ್ಯೂಸಿವ್​ ಟ್ಯಾಲೆಂಟ್​ ಅವಾರ್ಡ್​ 2020 ಕೂಡ ಲಭಿಸಿದೆ. ಅವರು 2019ರಲ್ಲಿ ಪೇಪರ್​ ಕಟಿಂಗ್​ ಆರ್ಟ್​ನಲ್ಲಿ 3 ನಿಮಿಷ 12 ಸೆಕೆಂಡುಗಳಲ್ಲಿ ಸ್ಟೆನ್ಸಿಲ್​ ಆರ್ಟ್​ ಬಿಡಿಸುವ ಮೂಲಕ ಕಳೆದ ವರ್ಷ ವಿಶ್ವದ ವೇಗದ ಸ್ಟೆನ್ಸಿಲ್​ ಆರ್ಟಿಸ್ಟ್ ದಾಖಲೆ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net