More

    ರಂಗೇರೇತ್ತಿದೆ ಹಳ್ಳಿ ಫೈಟ್​, ಗ್ರಾಪಂ ಚುನಾವಣೆ ಯಾವಾಗ ಗೊತ್ತಾ?

    ಬೆಂಗಳೂರು: ಕರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯಿತಿ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಜಿದ್ದಾಜಿದ್ದಿ ಹೋರಾಟಕ್ಕೆ ಹಳ್ಳಿ ಅಖಾಡ ಸಜ್ಜಾಗುತ್ತಿದೆ.

    ಗ್ರಾಪಂ ಚುನಾವಣೆಗೆ ಮೀಸಲಾತಿ ಪಟ್ಟಿ ಸಿದ್ಧವಾಗಿದ್ದು, ಚುನಾವಣೆ ದಿನಾಂಕ ಘೋಷಣೆ ಆಗಿಲ್ಲವಾದರೂ ಮತದಾನ ಪ್ರಕ್ರಿಯೆ ಸನಿಹದಲ್ಲೇ ಇದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ರಾಜ್ಯ ಚುನಾವಣಾ ಆಯೋಗ ಅಕ್ಟೋಬರ್​ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ. ಇದನ್ನೂ ಓದಿರಿ ‘ಸ್ವೀಟಿ’ಗೆ ಪೈರಸಿ ಕಾಟ, ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ರಾಧಿಕಾ ಕುಮಾರಸ್ವಾಮಿ

    ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೆ ಆ.31 ಕೊನೆಯ ದಿನವಾಗಿದ್ದು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಅಂತಿಮಗೊಳಿಸಿದ್ದು, ಈ ಪಟ್ಟಿ ಅಂತಿಮಗೊಂಡ 45 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕೆಂದು ಕಾಯ್ದೆಯಲ್ಲಿದೆ. ಹಾಗಾಗಿ ಆಯೋಗ ಅಕ್ಟೋಬರ್​ನಲ್ಲಿ ಚುನಾವಣೆ ನಡೆಸಬೇಕಾಗುತ್ತದೆ.

    ರಾಜ್ಯದ 6,025 ಗ್ರಾಪಂಗಳ ಪೈಕಿ ಶೇ.90 ಪಂಚಾಯಿತಿಗಳ ಅವಧಿ ಜೂನ್​-ಜುಲೈನಲ್ಲಿ ಅಂತ್ಯಗೊಂಡಿದೆ. ಕರೊನಾ ಕಾರಣಕ್ಕೆ ಚುನಾವಣಾ ಆಯೋಗ ಸಂವಿಧಾನದತ್ತ ಅಧಿಕಾರ ಬಳಸಿ ‘ಅಸಾಧಾರಣ ಸಂದರ್ಭ’ ಎಂದು ಪರಿಗಣಿಸಿ ಚುನಾವಣೆ ಮುಂದೂಡಿತ್ತು. ರಾಜ್ಯ ಸರ್ಕಾರ ಕೂಡ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಅಲ್ಲದೆ, ಮೀಸಲಾತಿ ವಿಚಾರ ಹೈಕೋರ್ಟ್​ ಮೆಟ್ಟಿಲೇರಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೀಗ ಚುನಾವಣಾ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

    ಗ್ರಾಪಂ ಚುನಾವಣೆಗೆ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷದ ಚಿಹ್ನೆಯ ಗುರುತಿನಡಿ ಅಖಾಡಕ್ಕಿಳಿಯುವಂತಿಲ್ಲ. ಆದರೂ ಇದು ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಗ್ರಾಮ ಮಟ್ಟದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಗಾಗಿ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ.

    ‘ಕೋವಿಡ್​ಗೆ ಕರ್ನಾಟಕದಲ್ಲಿ ಅತೀ ಹೆಚ್ಚು ಜನ ಬಲಿಯಾಗಿದ್ದರೂ ಸರ್ಕಾರ ಮುಚ್ಚಿಟ್ಟಿದೆ’

    ಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts