More

    ತಾಯಿಯ ಪ್ರಿಯತಮನ ವಿರುದ್ಧ ಪೋಕ್ಸೋ ಕೇಸು

    ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾಲ್ಕರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಾಯಿಯ ಪ್ರಿಯತಮನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ. ಬಾಲಕಿಯ ತಾಯಿ ಹಾಗೂ ಯುವಕನೊಬ್ಬ ಪ್ರೀತಿಸುತ್ತಿದ್ದು, ಇದನ್ನು ಬಾಲಕಿ ಹಾಗೂ ಬಾಲಕಿಯ ತಂದೆ ವಿರೋಧಿಸಿದ್ದರು. ವಿರೋಧ ಲೆಕ್ಕಿಸದೆ ಬಾಲಕಿಯ ತಾಯಿ ಯುವಕನ ಜತೆ ತೆರಳಿ ಜೀವನ ಆರಂಭಿಸಿದ್ದಳು. ಇತ್ತೀಚೆಗೆ ಯುವಕ, ಬಾಲಕಿ ತಾಯಿಯ ಜತೆ ವಾಸ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭ ತನ್ನನ್ನು ಬಿಗಿದಪ್ಪಿ ಚುಂಬಿಸಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts