More

  ಬುದ್ಧಿಮಾಂದ್ಯ ಹೆಣ್ಣು ಮಗು ಕೊಂದ ತಾಯಿ

  ಬೆಂಗಳೂರು: ಮಾತು ಬರಲಿಲ್ಲ ಎಂಬ ಕಾರಣಕ್ಕೆ ಬುದ್ಧಿಮಾಂದ್ಯ ಹೆಣ್ಣು ಮಗುವಿನ ಕುತ್ತಿಗೆ ಹಿಸುಕಿ ಹೆತ್ತ ತಾಯಿಯೇ ಅಮಾನುಷವಾಗಿ ಕೊಲೆ ಮಾಡಿದ್ದಾರೆ.
  ಚಿಕ್ಕಕಲ್ಲಸಂದ್ರದ ಮಂಜುನಾಥನಗರದ ಸಿರಿ ಅಪಾರ್ಟ್‌ಮೆಂಟ್ ಪ್ರೀತಿಕಾ (3) ಕೊಲೆಯಾದ ಮಗು. ಈ ಮಗು ಕೊಂದ ತಾಯಿ ರಮ್ಯಾ(35) ಎಂಬಾಕೆಯನ್ನು ಬಂಧಿಸಲಾಗಿದೆ. ಗುರುವಾರ ಮಧ್ಯಾಹ್ನ 12.30ಕ್ಕೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  10 ವರ್ಷದ ಹಿಂದೆ ರಮ್ಯಾ ಮತ್ತು ವೆಂಕಟೇಶಕೃಷ್ಣನ್ ಮದುವೆಯಾಗಿದ್ದು, ದಂಪತಿಗೆ 3 ವರ್ಷ 10 ತಿಂಗಳ ಅವಳಿ ಹೆಣ್ಣು ಮಕ್ಕಳು ಇದ್ದರು. ದಂಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು. ವೆಂಕಟೇಶ್ ನಾರ್ವೆಯಲ್ಲಿ ಉದ್ಯೋಗ ಮಾಡುತ್ತಿದ್ದರೆ ರಮ್ಯಾ ಕೆಲ ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಇತ್ತೀಚೆಗೆ ಬಿಟ್ಟು ಅವಳಿ ಮಕ್ಕಳನ್ನು ನೋಡಿಕೊಂಡಿದ್ದಳು. ಪತಿ ವೆಂಕಟೇಶ್ ಅವರ ತಂದೆ-ತಾಯಿ ಹಾಗೂ ಸಹೋದರ ವಾಜರಹಳ್ಳಿಯಲ್ಲಿ ನೆಲೆಸಿದ್ದಾರೆ.

  ಅವಳಿ ಮಕ್ಕಳ ಪೈಕಿ ಪ್ರೀತಿಕಾ ಬುದ್ಧಿಮಾಂದ್ಯೆ. ಮಾತು ಬರುತ್ತಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ರಮ್ಯಾ, ಗುರುವಾರ ಮಧ್ಯಾಹ್ನ 12.30ಕ್ಕೆ ಮಗ ಪ್ರೀತಿಕಾಳ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರೀತಿಕಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪರೀಕ್ಷಿಸಿದ ವೈದ್ಯರು ಮಗು ಪ್ರೀತಿಕಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

  ವಾಜರಹಳ್ಳಿಯಲ್ಲಿ ಇರುವ ಮೈದುನಾಗೆ ಕರೆ ಮಾಡಿ ಮಗು ಪ್ರೀತಿಕಾಳನ್ನು ಕೊಲೆ ಮಾಡಿರುವ ವಿಚಾರವನ್ನು ರಮ್ಯಾ ತಿಳಿಸಿದ್ದಾಳೆ. ಮೈದುನಾ ಆಸ್ಪತ್ರೆಗೆ ಬಂದಿದ್ದು, ಸುಬ್ರಮಣ್ಯಪರ ಪೊಲೀಸರು ಅತ್ತಿಗೆ ರಮ್ಯಾ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ರಮ್ಯಾಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  See also  ಪ್ರಿಯಕರನ ಮನೆ ಹತ್ತಿರವೇ ಆತ್ಮಹತ್ಯೆ: ಅನಿಶಾ ತಾಯಿಯ ನಿರ್ಧಾರದಿಂದ ಆರೋಪಿಗೆ ಕಾದಿದೆಯಾ ಶಾಕ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts