More

    ನ್ಯಾಯಾಲಯ ಆವರಣದಲ್ಲಿ ಮತಯಾಚನೆ

    ಭದ್ರಾವತಿ: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಪರವಾಗಿ ಪಕ್ಷದ ಮುಖಂಡರು ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಮತ ಯಾಚಿಸಿದರು. ಕರಪತ್ರ ನೀಡಿ ಮತಯಾಚನೆ ನಡೆಸಿದ ಅವರು ಡಾ. ಧನಂಜಯ ಸರ್ಜಿ ಗೆಲುವಿಗೆ ಸಹಕರಿಸುವಂತೆ ವಕೀಲರಲ್ಲಿ ಮನವಿ ಮಾಡಿದರು. ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಚುನಾವಣಾ ಸಂಚಾಲಕ ಕೆ.ಎನ್.ಶ್ರೀಹರ್ಷ, ಮುಖಂಡರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ವಕೀಲರಾದ ಲೋಕೇಶ್ವರ ರಾವ್, ಶ್ರೀನಿವಾಸ್, ನವರತ್ನಮಾಲಾ, ಮಂಜುನಾಥ್, ರಾಕೇಶ್, ರಾಮಲಿಂಗಯ್ಯ, ಮೈಲಾರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts