ಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!

ಬೆಂಗಳೂರು: ಜೋಳಿಗೆಯಲ್ಲಿ ಕುಳಿತು ಆನ್​ಲೈನ್​ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಪಾಲಿಗೆ ಅದೇ ಜೋಳಿಗೆ ಮೃತ್ಯುವಾಗಿ ಪರಿಣಮಿಸಿದೆ. ನಗರ ಹೊರವಲಯದ ದರ್ಗಾಜೋಗಹಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್​, ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ. ಮನೆಯಲ್ಲಿದ್ದ ಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಕೋಣೆಯಲ್ಲಿ ಜೋಳಿಗೆ ಕಟ್ಟಲಾಗಿತ್ತು. ನಿನ್ನೆ ಆನ್​ಲೈನ್​ ತರಗತಿಗೆ ಹಾಜರಾದ ಬಾಲಕ, ಕೋಣೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಸಂಜೆಯಾದರೂ ಆತ ಕೋಣೆಯಿಂದ ಹೊರ ಬಾರಲಿಲ್ಲ. ಅನುಮಾನಗೊಂಡು ಪಾಲಕರು ನೋಡಿದಾಗ ಆಘಾತ ಕಾದಿತ್ತು. ಇದನ್ನೂ … Continue reading ಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!