More

    ಕೆಪಿಸಿಸಿ ಕಚೇರಿಗೆ ಅರಮನೆ ಟಚ್​, ವಾಸ್ತುದೋಷ ರಿಪೇರಿಗೆ ಬಾಗಿಲನ್ನೇ ಬದಲಿಸಿದ ಡಿಕೆಶಿ

    ಬೆಂಗಳೂರು: ಇತ್ತೀಚಿಗಷ್ಟೇ ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹೋಮ-ಹವನ ನೆರವೇರಿಸಿದ್ದ ಡಿ.ಕೆ.ಶಿವಕುಮಾರ್​, ಇದೀಗ ಕಚೇರಿಯಲ್ಲಿ ವಾಸ್ತು ದೋಷ ರಿಪೇರಿ ಮಾಡಿಸುವ ಕೆಲಸದಲ್ಲಿ ಬಿಸಿಯಾಗಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಮನೆ ಮತ್ತು ತಮಗೆ ಸೇರಿದ ಗ್ಲೋಬಲ್​ ಕಾಲೇಜ್​ನಲ್ಲಿರುವ ಆರ್ಕಿಟೆಕ್ಚರ್​ ಹೋಲುವಂತೆ ಪಕ್ಷದ ಕಚೇರಿಯನ್ನು ಅಲಂಕರಿಸಲು ನಿರ್ಧರಿಸಿದ್ದು, ಜ್ಯೋತಿಷಿಗಳ‌ ಸಲಹೆಯಂತೆ ಬದಲಾವಣೆ ಮಾಡಲಾಗುತ್ತಿದೆ. ಪಕ್ಷದ ಕಚೇರಿಗೆ ಗ್ಲೋಬಲ್​ ಲುಕ್​ ನೀಡುವ ಉದ್ದೇಶದಿಂದ ಹತ್ತಕ್ಕೂ ಹೆಚ್ಚು ಪಿಲ್ಲರ್​ಗಳನ್ನು ಹೆಚ್ಚುವರಿಯಾಗಿ ಹಾಕಲಾಗುತ್ತಿದೆ. ಜತೆಗೆ ಅಮೆರಿಕ ಅಧ್ಯಕ್ಷರ ನಿವಾಸ ವೈಟ್​ಹೌಸ್​ ರೀತಿ ಕಾಣಬೇಕೆಂದು ಸಣ್ಣಪುಟ್ಟ ಬದಲಾವಣೆ ಜತೆಗೆ ಬಿಳಿ ಬಣ್ಣವನ್ನೂ ಬಳಿಯಲಾಗುತ್ತಿದೆ. ಇದನ್ನೂ ಓದಿರಿ ರಂಗೇರೇತ್ತಿದೆ ಹಳ್ಳಿ ಫೈಟ್​, ಗ್ರಾಪಂ ಚುನಾವಣೆ ಯಾವಾಗ ಗೊತ್ತಾ?

    ಕಚೇರಿ ಒಳಗೆ ಖಾಲಿ ಬಿದ್ದಿದ್ದ ಒಂದು ಫ್ಲೋರ್​ ಅನ್ನೂ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಒಂದು ಫ್ಲೋರ್​ ಪೂರ್ತಿ ಕಚೇರಿ ಸಿಬ್ಬಂದಿಗೆ ಮೀಸಲಿಡಲಾಗುತ್ತದೆ. ಕಾರ್ಪೋರೇಟ್​ ಕಚೇರಿ ರೀತಿ ಅದು ಸಿದ್ಧವಾಗಲಿದೆ. ಘಟಕಗಳ ಕಚೇರಿಗಳು ಒಂದು ಕಡೆ ಬರಲಿವೆ.

    ಕೆಪಿಸಿಸಿ ಕಚೇರಿಗೆ ಅರಮನೆ ಟಚ್​, ವಾಸ್ತುದೋಷ ರಿಪೇರಿಗೆ ಬಾಗಿಲನ್ನೇ ಬದಲಿಸಿದ ಡಿಕೆಶಿ50 ಜನ ಸಭೆ ನಡೆಸಬಹುದಾದ ಎರಡು ಮೀಟಿಂಗ್​ ಹಾಲ್​ ಮಾಡಲಾಗುತ್ತಿದೆ. ಜತೆಗೆ ಕ್ಯಾಂಟೀನ್​ ಕೂಡ ಇರಲಿದೆ. ಇಡೀ ಕಟ್ಟಡವನ್ನು ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ.

    ಇನ್ನು ಡಿ.ಕೆ.ಶಿವಕುಮಾರ್​ ಅವರ ಕೊಠಡಿಯಲ್ಲಿ ನವೀಕರಣ ಆರಂಭವಾಗಿದೆ. ಅವರು ಕೂರುವ ಸ್ಥಳ ಬದಲಾಗಿದೆ. ಕಚೇರಿಯಲ್ಲಿ ಬಾಗಿಲನ್ನೂ ಬದಲಿಸಲಾಗಿದ್ದು, ವಾಸ್ತುತಜ್ಞರು ಮತ್ತು ಜ್ಯೋತಿಷಿಗಳ ಅಣತಿಯಂತೆ ಬದಲಾವಣೆ ಮಾಡಿಕೊಳ್ಳುತ್ತಲೇ, ಕಟ್ಟಡಕ್ಕೆ ಹೊಸ ರೂಪ ನೀಡುವ ಕೆಲಸವೂ ನಡೆದಿದೆ ಎಂದು ತಿಳಿದುಬಂದಿದೆ. ಮುಂದಿನ ದಸರಾ ಒಳಗಾಗಿ ಕಚೇರಿ ಸಿಂಗಾರಗೊಳ್ಳುವ ಸಾಧ್ಯತೆ ಇದೆ.

    ‘ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ…’ ಎಂದ ಹಿರಿಯ ರಾಜಕಾರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts