More

    ‘ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ…’ ಎಂದ ಹಿರಿಯ ರಾಜಕಾರಣಿ

    ಮಂಡ್ಯ: ಮೂರ್ನಾಲ್ಕು ದಿನದಿಂದ ರಾಜ್ಯಾದ್ಯಂತ ಹೆಚ್ಚು ಸದ್ದು ಮಾಡುತ್ತಿರುವುದು ಡ್ರಗ್ಸ್​ ವಿಚಾರ. ಬಗೆದಷ್ಟು ಆಳ ಎಂಬಂತಿದೆ ಮಾದಕ ಜಾಲದ ರಹಸ್ಯ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಿನಿಮಾ ರಂಗ, ರಾಜಕಾರಣಿಗಳನ್ನೇ ಟಾರ್ಗೆಟ್​ ಮಾಡಿ ಡ್ರಗ್ಸ್​ ಪೆಡ್ಲರ್​ಗಳು ವ್ಯವಹಾರ ಕುದುರಿಸುತ್ತಿರುವ ಆತಂಕಕಾರಿ ವಿಚಾರಗಳು ಬಯಲಾಗುತ್ತಿವೆ.

    ಈ ನಡುವೆ ವಿಧಾನ ಪರಿಷತ್​ ಸದಸ್ಯ ಎಚ್​.ವಿಶ್ವನಾಥ್​, ‘ಡ್ರಗ್ಸ್​ ಜಾಲವನ್ನು ಭೇದಿಸಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳು ಹಾಳಾಗಿ ಬಿಡುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿರಿ ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ‘ಯಾರನ್ನಾದರೂ ಸಾಯಿಸಿ ದೊಡ್ಡವನಾಗಬೇಕು ಎನ್ನುವ ಸ್ಥಿತಿ ಈಗ ಇದೆ. 'ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ...' ಎಂದ ಹಿರಿಯ ರಾಜಕಾರಣಿಆದ್ದರಿಂದ, ಸರ್ಕಾರ ಈ ಡ್ರಗ್ಸ್​ ಜಾಲವನ್ನು ಭೇದಿಸಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಪಾಲಕರು, ಶಿಕ್ಷಣ ಸಂಸ್ಥೆಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದರು.

    ‘ಒಂದು ಮಗುವನ್ನು ರಕ್ಷಣೆ ಮಾಡುವುದು ಸಮಾಜದ ಎಲ್ಲರ ಹೊಣೆ. ರಾಜಕಾರಣಿ ಮಕ್ಕಳು ಆರ್ಥಿಕವಾಗಿ ಚೆನ್ನಾಗಿ ಇರುತ್ತಾರೆ. ಜತೆಗೆ ವಿಶೇಷ ಸೌಲಭ್ಯ ಇರುತ್ತವೆ. ಹೀಗಾಗಿ ರಾಜಕಾರಣಿ ಮಕ್ಕಳು ಹಾಳಾಗಲು ಹೆಚ್ಚು ಅವಕಾಶವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

    ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​; ರವಿ ಬೆಳಗೆರೆ v/s ಇಂದ್ರಜಿತ್​ ಲಂಕೇಶ್​

    ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts