ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

chiranjivi sarja- indrajith lankesh
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದ ಇಂದ್ರಜಿತ್​ ಲಂಕೇಶ್​, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಸುಂದರ್​ ರಾಜ್​, 'ನಾವು ಡಾ.ರಾಜ್​ಕುಮಾರ್​ ಪಾಲಿಸಿ ಬೆಳೆಸಿಕೊಂಡು ಬಂದವರು, ನಮ್ಮ ಕುಟುಂಬದಲ್ಲಿ ಅಂತಹ ದುರಾಭ್ಯಾಸ ಯಾರಿಗೂ ಇಲ್ಲ. ಮುಂಬೈ ಇಂಡಸ್ಟ್ರಿಯೇ ಬೇರೆ, ಸ್ಯಾಂಡಲ್​ವುಡ್​ ಇಂಡಸ್ಟ್ರಿಯೇ ಬೇರೆ. ಚಿರು ನಿಧನವಾಗಿರೋದು ಹೃದಯಾಘಾತದಿಂದ. ಕೋವಿಡ್​ ಇದ್ದದ್ದರಿಂದ ಪೋಸ್ಟ್ ಮಾರ್ಟಮ್​ ಮಾಡಲಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

'ಚಿರು ಕಣ್ಮರೆಯಾಗಿ 3 ತಿಂಗಳಾಗಿದೆ. ಈ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈಗ ನಾವಿಲ್ಲ. ಕರ್ನಾಟಕದ ಫಿಲ್ಮ್ ಇಂಡಸ್ಟ್ರಿ ಫೈನೆಸ್ಟ್ ಇಂಡಸ್ಟ್ರಿ. ಬಾಂಬೆ ಇಂಡಸ್ಟ್ರಿ ಬೇರೆ, ಸ್ಯಾಂಡಲ್​ವುಡ್ ಬೇರೆ' ಎಂದು ಸುಂದರ್​ ರಾಜ್​ ಪ್ರತಿಕ್ರಿಯಿಸಿದ್ದಾರೆ.

ಆ ಮೂಲಕ ಇಂದ್ರಜಿತ್​ ಲಂಕೇಶ್​ ಹೇಳಿಕೆ ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದ ಅನುಮಾನಕ್ಕೆ ತೆರೆ ಎಳೆದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net