More

    ನಾನು ಚಿಲ್ಲರೆ ಕೆಲಸ ಮಾಡಲ್ಲ; ಡಿಕೆಶಿ ಸ್ಪಷ್ಟೋಕ್ತಿ

    ಬೆಂಗಳೂರು: ಪೆನ್‌ಡ್ರೈವ್ ಇದೆ ಎಂದು ನಾನು ಹೆದರಿಸಲ್ಲ. ನಾನು ಈ ರೀತಿಯ ಚಿಲ್ಲರೆ ಕೆಲಸ ಮಾಡಲ್ಲ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದರೆ ನಿದ್ರೆ ಬರಲ್ಲ ಎಂದು ಕೆಣಕಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಏನು ಆಗಬೇಕೋ, ಅದು ಆಗುತ್ತದೆ ಎಂದರು.
    ಹಾಗೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಅವರ ಜತೆಗೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದ್ರು ಅನ್ನೋದನ್ನ ಅವರನ್ನೇ ಕೇಳಬೇಕು. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನು ಭಗವಂತನೂ ಕ್ಷಮಿಸಲ್ಲ ಎಂದು ಹೇಳಿದರು.
    ಇದು ಹಳೇ ವಿಡಿಯೋ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ. ಅಂದರೆ ಪ್ರಜ್ವಲ್ ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ. ಈ ವರೆಗೂ ಗುಸುಗುಸು ಚರ್ಚೆಯಾಗಿದ್ದು, ಈಗ ಬಹಿರಂಗವಾಗಿದೆ ಎಂದ ಅವರು, ಬಿಜೆಪಿಯವರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ ಎಂದರು.
    ರಾಜ್ಯದಲ್ಲಿ ಏನೂ ಕ್ರಮ ಆಗಿಲ್ಲ ಎಂದು ಕೇಂರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಹಾಗಿದ್ದರೆ ವಿದೇಶಕ್ಕೆ ಹೋಗಲು ಯಾರು ಪರ್ಮಿಷನ್ ಕೊಟ್ಟರು? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಪ್ರಜ್ವಲ್ ಅಮಾನತು ಕಣ್ಣು ಒರೆಸುವ ನಾಟಕ. ರಾಜಕೀಯ ನನಗೆ ಗೊತ್ತಿದೆ. ಗೃಹ ಸಚಿವರು ತಕ್ಷಣವೇ ಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
    ಎಚ್‌ಡಿಕೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂದರು, ಈಗ ನನ್ನ ಮಗ ಅಲ್ಲ ಎಂದು ನೀನು ಯಾಕೆ ಈಗ ಜಾರಿಕೊಳ್ತಿದ್ಯ ಕುಮಾರಸ್ವಾಮಿ? ಜನ ದಡ್ಡರೇ? ಎಂದು ಏಕ ವಚನದಲ್ಲಿ ಪ್ರಶ್ನಿಸಿದರು. ಜತೆಗೆ ರೇವಣ್ಣ ದೇವೇಗೌಡರ ಮಗನೋ ಅಲ್ಲವೋ ಅವರೇ ಹೇಳಿ ಬಿಡಲಿ ಎಂದು ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts