

Snake idols : ಮೀನು ಹಿಡಿಯುತ್ತಿರುವ ಸಂದರ್ಭದಲ್ಲಿ ಮೀನುಗಾರನೊಬ್ಬನ ಬಲೆಯಲ್ಲಿ ಬಹಳ ಆಕರ್ಷಕವಾದ ಎರಡು ಹಾವಿನ ವಿಗ್ರಹಗಳು ಪತ್ತೆಯಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಥನೂರಿನ ಸಮುದ್ರದಲ್ಲಿ ಈ ಘಟನೆ ನಡೆದಿದೆ. ಹೊಸ ಬೀಚ್ನಲ್ಲಿ ಮೀನುಗಾರ ರಸೆಲ್ ಎಂಬವರ ಬಲೆಗೆ ಈ ಎರಡು ವಿಗ್ರಹಗಳು ಸಿಲುಕಿಕೊಂಡಿವೆ. ಹಿತ್ತಾಳೆಯಿಂದ ಮಾಡಲಾದ ಈ ವಿಗ್ರಹಗಳು ಬರೋಬ್ಬರಿ ಐದು ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿದೆ.
ಪ್ರಸ್ತುತ ಎರಡೂ ವಿಗ್ರಹಗಳು ಥನೂರು ಪೊಲೀಸ್ ಠಾಣೆಯ ವಶದಲ್ಲಿವೆ. ಇವು ದೇವಸ್ಥಾನದಿಂದ ಕದ್ದ ವಿಗ್ರಹಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ತನಿಖೆನ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮುದ್ರದಲ್ಲಿ ಈ ಹಾವಿನ ವಿಗ್ರಹಳು ಸಿಕ್ಕಿರುವುದು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಪುರಾತನ ಕಾಲದ ವಿಗ್ರಹ ಕಳುವಿನ ಜಾಲದ ಬಗ್ಗೆಯು ಸಂಶಯ ವ್ಯಕ್ತವಾಗಿದೆ. ಪ್ರಾಚೀನ ಕಾಲದ ವಿಗ್ರಹಗಳಿಗೆ ತುಂಬಾ ಬೇಡಿಕೆ ಇದೆ. ವಿದೇಶಗಳಲ್ಲಿ ಇಂಂತಹ ವಿಗ್ರಹಗಳನ್ನು ಕೊಂಡುಕೊಳ್ಳುತ್ತಾರೆ. ಇದೀಗ ಸಮುದ್ರದಲ್ಲೇ ವಿಗ್ರಹ ಸಿಕ್ಕಿರುವುದಿಂದ ಅನುಮಾನ ಬಲವಾಗಿದೆ. ತನಿಖೆಯಲ್ಲಿ ಏನು ತಿಳಿದುಬರಲಿದೆ ಎಂಬ ಕುತೂಹಲ ಸದ್ಯ ಮೂಡಿದೆ. (ಏಜೆನ್ಸೀಸ್)