

ಆಂಧ್ರಪ್ರದೇಶ: ಟಾಲಿವುಡ್ ನಟ ರಾಮ್ ಪೋತಿನೇನಿ ಮತ್ತು 'ಕಿಸ್' ಬೆಡಗಿ ನಟಿ ಶ್ರೀಲೀಲಾ ನಟನೆಯ 'ಸ್ಕಂದ' ಚಿತ್ರದ ಪ್ರೀ-ರಿಲೀಸ್ ಈವೆಂಟ್ ಬಗ್ಗೆ ಚಿತ್ರತಂಡ ಇದೀಗ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ.
ಹೆಸರಾಂತ ನಿರ್ದೇಶಕ ಬೋಯಪತಿ ಶ್ರೀನು ನಿರ್ದೇಶನದ ಆಕ್ಷನ್, ಎಂಟರ್‌ಟೈನರ್ ಸಿನಿಮಾ 'ಸ್ಕಂದ' ಚಿತ್ರವು ಸೆಪ್ಟೆಂಬರ್ 15, 2023 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಇದೇ ಆಗಸ್ಟ್ 26 ರಂದು ನಡೆಯಲಿದೆ ಎಂದು ಹೊಸ ಪೋಸ್ಟರ್ ಮೂಲಕ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
'ಸ್ಕಂದ' ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಎಸ್. ಥಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಮ್ ಪೋತಿನೇನಿ ಮತ್ತು ಶ್ರೀಲೀಲಾ ಜೋಡಿಯನ್ನು ಪರದೆಯ ಮೇಲೆ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).