More

    ಸಿಲಿಕಾನ್ ಸಿಟಿ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ; ಪೋಸ್ಟ್​ನಲ್ಲಿ ಹೇಳಿದ್ದೇನು?

    ಬೆಂಗಳೂರು: ಭಾರತದ ಡಿಜಿಟಲೀಕರಣಕ್ಕೆ ಮನಸೋತ ಮೈಕ್ರೋಸಾಫ್ಟ್ ಸಹ​ ಸಂಸ್ಥಾಪಕ ಬಿಲ್​ ಗೇಟ್ಸ್, ಇತ್ತೀಚೆಗೆ​ ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಬೈಕ್​ ಶೋರೂಂನಲ್ಲಿ ಬೆಂಕಿ; 300ಕ್ಕೂ ಹೆಚ್ಚು ವಾಹನ ಅಗ್ನಿಗಾಹುತಿ

    ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್‌ ಕುಸುಮಾ ಅವರನ್ನು ಹಾಡಿ ಹೊಗಳಿದ ಬಿಲ್ ಗೇಟ್ಸ್, ಅವರ ಕೆಲಸದ ಬಗ್ಗೆ ತಮ್ಮ ‘ಬಿಲ್ ಅಂಡ್​ ಮೆಲಿಂಡಾ ಗೇಟ್ಸ್’ ಫೌಂಡೇಷನ್​ನ ವೆಬ್ಸೈಟ್ ಲಿಂಕ್ ಅಲ್ಲಿ ವೀಡಿಯೋ ಪ್ರಕಟಿಸಿದ್ದಾರೆ. ಸದ್ಯ ಹಲ್ ಚಲ್ ಎಬ್ಬಿಸುತ್ತಿರುವ ಈ ಒಂದು ಪೋಸ್ಟ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

    ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿಯ ವೃತ್ತಿಜೀವನದ ಹಾದಿ ಎಂಬ ಶೀರ್ಷಿಕೆಯಡಿ ಈ ಪೋಸ್ಟ್ ಹಂಚಿಕೊಂಡಿರುವ ಬಿಲ್​ ಗೇಟ್ಸ್​, ಭಾರತದಲ್ಲಿ ಅಳವಡಿಕೆ ಮಾಡಿರುವ ಡಿಜಿಟಲಿಕರಣಕ್ಕೆ ಫಿದಾ ಆಗಿದ್ದಾರೆ. ಈ ಬಗ್ಗೆ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹೀಗಿದೆ. “ನನ್ನ ಭಾರತ ಪ್ರವಾಸದಲ್ಲಿ ನಾನು ನಂಬಲಾಗದ ಶಕ್ತಿಯೊಂದನ್ನು ಭೇಟಿಯಾದೆ. ಆ ಶಕ್ತಿಯೇ ಕುಸುಮಾ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಅದ್ಭುತ ಕೆಲಸ ಮಾಡುತ್ತಿರುವ ಈಕೆ ಗಮನಾರ್ಹ ಯುವತಿ” ಎಂದು ಬರೆದಿದ್ದಾರೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಈವರೆಗೂ ಶೇ. 90 ಮಂದಿ ಪತ್ತೆಹಚ್ಚದ ಬೆಕ್ಕನ್ನು ನೀವು ಗುರುತಿಸಬಲ್ಲಿರಾ!?

    “ಹಣಕಾಸು ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕುಸುಮಾರಂತಹ ಅಂಚೆ ಕಚೇರಿ ಪೋಸ್ಟ್‌ಮಾಸ್ಟರ್‌ಗಳು ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಸಾಧನಗಳು ಮತ್ತು ಬಯೋಮೆಟ್ರಿಕ್‌ಗಳನ್ನು ಬಳಕೆ ಮಾಡುತ್ತಿರುವುದು ಗಮನಾರ್ಹ. ಆಕೆ ಕೇವಲ ಹಣಕಾಸು ಸೇವೆಗಳನ್ನು ಒದಗಿಸುತ್ತಿಲ್ಲ, ಬದಲಾಗಿ ತನ್ನ ಸಮುದಾಯಕ್ಕೆ ಭರವಸೆ ಮತ್ತು ಆರ್ಥಿಕ ಸಬಲೀಕರಣವನ್ನು ನೀಡುತ್ತಿದ್ದಾಳೆ” ಎಂದು ವಿಡಿಯೋ ಲಿಂಕ್​​ ಹಾಕಿ ಪೋಸ್ಟ್​ ಮಾಡಿದ್ದಾರೆ.

    ಪೋಸ್ಟ್​ನಲ್ಲಿರುವ ವಿಡಿಯೋ ಲಿಂಕ್​:  https://www.gatesfoundation.org/video/kusuma-ippb-india?utm_source=linkedin&utm_medium=social&utm_campaign=dpi2023&utm_content=BG

    ಪ್ಯಾನ್​ ಇಂಡಿಯಾ ‘ಸಲಾರ್’​; ಡಬ್ಬಿಂಗ್​ ಪ್ರಾರಂಭಿಸಿದ ನಟಿ ಶ್ರುತಿ ಹಾಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts