ಪ್ಯಾನ್​ ಇಂಡಿಯಾ 'ಸಲಾರ್'​; ಡಬ್ಬಿಂಗ್​ ಪ್ರಾರಂಭಿಸಿದ ನಟಿ ಶ್ರುತಿ ಹಾಸನ್​

Untitled design (56)
Published on

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಮತ್ತು ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಪ್ಯಾನ್ ಇಂಡಿಯಾ 'ಸಲಾರ್'​ ಚಿತ್ರದ ಬಗ್ಗೆ ಇದೀಗ ಹೊಸ ಅಪ್ಡೇಟ್​ವೊಂದು ಲಭಿಸಿದೆ.

ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಸಲಾರ್' ಇದೇ ಸೆಪ್ಟೆಂಬರ್ 28, 2023 ರಂದು ಜಾಗತಿಕವಾಗಿ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಆಕ್ಷ್ಯನ್​, ಮಾಸ್​ ಎಂಟರ್​ಟೈನರ್​ ಜಾನರ್​ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ತಮಿಳು ಚಿತ್ರರಂಗದ ಸ್ಟಾರ್​ ನಟಿ ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸದ್ಯ ಚಿತ್ರದ ಡಬ್ಬಿಂಗ್​ ಕೆಲಸವನ್ನು ಪ್ರಾರಂಭಿಸಿರುವ ಶ್ರುತಿ ಹಾಸನ್, ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಡಬ್ಬಿಂಗ್ ಶುರುವಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಶ್ರುತಿ ಅವರಿಗೆ ಅಭಿನಂದನೆ ತಿಳಿಸಿದ ಅಭಿಮಾನಿಗಳು, ಫೋಟೋಗೆ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್​ ನೀಡಿದ್ದಾರೆ. ಮತ್ತೊಂದೆಡೆ, ಪ್ರಭಾಸ್ ತಮ್ಮ ಡಬ್ಬಿಂಗ್ ಕೆಲಸವನ್ನು ಈಗಾಗಲೇ ಮುಗಿಸಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದೆ.

ಚಿತ್ರದಲ್ಲಿ ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಟಿನ್ನು ಆನಂದ್, ಈಶ್ವರಿ ರಾವ್, ಮತ್ತು ಶ್ರೀಯಾ ರೆಡ್ಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಲಾರ್​ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net