More

    ‘ಟೋಬಿ’ ಪೇಯ್ಡ್​ ಪ್ರೀಮಿಯರ್​ ಇಲ್ಲ; ಕಾರಣ ತಿಳಿಸಿದ ನಟ ರಾಜ್​ ಬಿ.ಶೆಟ್ಟಿ

    ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ, ಬರಹಗಾರ ರಾಜ್​ ಬಿ. ಶೆಟ್ಟಿ ನಟನೆಯ ಬಹುನಿರೀಕ್ಷಿತ ‘ಟೋಬಿ’ ಸಿನಿಮಾದ ಅದ್ದೂರಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಮಧ್ಯೆ ರಾಜ್​, ಸಿನಿಪ್ರೇಕ್ಷಕರಿಗೆ ಮುಖ್ಯ ಸಂದೇಶವೊಂದನ್ನು ಕಿರು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಪೇಯ್ಡ್​ ಪ್ರೀಮಿಯರ್​ ಶೋಗಳ ಬಗ್ಗೆ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

    ಈ ಹಿಂದೆಯೇ ಚಿತ್ರತಂಡ ತಿಳಿಸಿದಂತೆ ಆಗಸ್ಟ್​ 25 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ‘ಟೋಬಿ’ ಸಜ್ಜಾಗಿದೆ. ಇದರ ನಡುವೆ ಚಿತ್ರದ ಪೇಯ್ಡ್​ ಪ್ರೀಮಿಯರ್​ ಅಥವಾ ಸೆಲೆಬ್ರಿಟಿ ಶೋಗಳು ಇದೆಯಾ? ಪ್ರೀಮಿಯರ್​ ನೋಡಲು ಟಿಕೆಟ್​ ಬುಕಿಂಗ್ಸ್​ ಯಾವಾಗ ತೆರಯಲಿದೆ ಎಂಬ ಹಲವು ಪ್ರಶ್ನೆಗಳು ಸಿನಿಪ್ರೇಕ್ಷಕರಿಂದ ಕೇಳಿಬಂದಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ನಟ ರಾಜ್​ ವಿಡಿಯೋ ಮುಖೇನ ಉತ್ತರಿಸಿದ್ದಾರೆ.

    ‘ಟೋಬಿ’ ಚಿತ್ರದ ಯಾವುದೇ ಪೇಯ್ಡ್​ ಪ್ರೀಮಿಯರ್​ ಅಥವಾ ಸೆಲೆಬ್ರಿಟಿ ಶೋಗಳು ಇರುವುದಿಲ್ಲ. ನಾವು ಈ ಪ್ರದರ್ಶನಗಳನ್ನು ಆಯೋಜಿಸಿಲ್ಲ. ಎಲ್ಲರಿಗೂ ಆಗಸ್ಟ್​ 25 ರಂದೇ ಟೋಬಿ ಕಾಣಸಿಗಲಿದ್ದಾನೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ, ಸಿನಿಮಾ ವೀಕ್ಷಿಸಿ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

    VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts