VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

This video of a haircutting robot
Published on

ಅಮೆರಿಕಾ: ತಾಂತ್ರಿಕ ಅಭಿವೃದ್ಧಿಯನ್ನು ಬಳಸಿಕೊಂಡು ಮನುಷ್ಯ ತನ್ನ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತಿದ್ದಾನೆ. ಮನೆಗೆಲಸ, ಹೊರಗಿನ ಕೆಲಸಗಳನ್ನೆಲ್ಲ ತಂತ್ರಜ್ಞಾನದಿಂದಲೇ ಮುಗಿಸುತ್ತಿದ್ದಾರೆ. ಸ್ವಯಂಚಾಲಿತ ಫ್ಲೋರ್ ಕ್ಲೀನರ್‌ಗಳಿಂದ ಹಿಡಿದು ಮನೆಯಲ್ಲಿ ಕೆಲಸ ಮಾಡಲು ರೋಬೋಟ್‌ಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿ ವಿಡಿಯೋವೊಂದು ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ವೈರಲ್​​ ವಿಡಿಯೋದಲ್ಲಿ ಏನಿದೆ?: ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದಾನೆ. ರೋಬೋಟ್‌ ಕೂದಲನ್ನು ಕತ್ತರಿಸುತ್ತಿರುವುದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ಕೆಲವು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್​ವೊಂದು ಪೋಸ್ಟ್ ಮಾಡಿದೆ. ಆದರೆ ಇದೀಗ ವಿಡಿಯೋದ ಒಂದು ಭಾಗ ವೈರಲ್ ಆಗಿದೆ.

ಈ ವೈರಲ್ ವಿಡಿಯೋ ಅಮೆರಿಕದ್ದು ಎಂದು ತಿಳಿದುಬಂದಿದೆ. ಅಮೆರಿಕನ್ ಇಂಜಿನಿಯರ್ ಶೇನ್ ಡಿಸ್ರಪ್ಟ್ ಅವರು ಸ್ವತಃ ನಿರ್ಮಿಸಿದ ವಿಶೇಷ ರೋಬೋಟ್‌ನೊಂದಿಗೆ ತಮ್ಮ ತಲೆ ಕೂದಲನ್ನು ಕಟ್​​ ಮಾಡಿಸಿಕೊಂಡಿದ್ದಾರೆ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

'ನಾನು ಇದನ್ನು ಮೊದಲ ತಲೆಮಾರಿನ ಯಂತ್ರವೆಂದು ಪರಿಗಣಿಸುತ್ತೇನೆ, ಕೂದಲು ಕತ್ತರಿಸಲು ಕೆಲವು ವಿಶಿಷ್ಟ ಶೈಲಿಗಳನ್ನು ಆಯ್ಕೆ ಮಾಡಲು ನಾನು ಇನ್ನೊಂದು ಯಂತ್ರವನ್ನು ತಯಾರಿಸಲು ಬಯಸುತ್ತೇನೆ' ಎಂದಿದ್ದಾರೆ. ಆದಾಗ್ಯೂ, ಈ ವಿಡಿಯೋ ಹಳೆಯದಾಗಿದ್ದರೂ ರೆಡ್ಡಿಟ್‌ನಲ್ಲಿ ಮರು ಶೇರ್ ಮಾಡಲಾಗಿದೆ. ಈ ವಿಡಿಯೋ ಮತ್ತೆ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net