More

    ಗಿನ್ನಿಸ್ ದಾಖಲೆ; ನಿದ್ದೆಯಲ್ಲೇ 160 ಕಿ.ಮೀ ನಡೆದ ಬಾಲಕ

    ನವದೆಹಲಿ: ಕೆಲವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. 36 ವರ್ಷಗಳ ಹಿಂದೆ ನಡೆದ ಈ ವಿಚಿತ್ರ ಘಟನೆ ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ.

    1987 ಏಪ್ರಿಲ್ 6ರಂದು, 11 ವರ್ಷದ ಮೈಕೆಲ್ ಡಿಕ್ಸನ್ ಎಂಬ ಅಮೆರಿಕಾದ ಹುಡುಗ, ಇಂಡಿಯಾನಾದ ಪೆರುವಿನಲ್ಲಿ ರೈಲು ಹಳಿಯಲ್ಲಿ ಅಲೆದಾಡುತ್ತಿದ್ದನು. ಬೆಳಗಿನ ಜಾವ 2.45ರ ವೇಳೆಗೆ ಆತನನ್ನು ಕಂಡ ರೈಲ್ವೆ ಸಿಬ್ಬಂದಿ ಮೈಕೆಲ್‌ನ ಅಸಹಜ ಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಅವಮ ವಿಳಾಸವನ್ನು ಕೇಳಿದಾಗ, ಡಿಕ್ಸನ್ ಅವರು ಇಲಿನಾಯ್ಸ್‌ನ ಡ್ಯಾನ್‌ವಿಲ್ಲೆಯಿಂದ ಬಂದಿದ್ದಾನೆಂದು ತಿಳಿಯಿತ್ತು. ಡಿಕ್ಸನ್ ತನ್ನ ಮನೆಯ ಸಮೀಪವಿರುವ ನಿಲ್ದಾಣದಿಂದ ಗೂಡ್ಸ್ ರೈಲನ್ನು ಹತ್ತಿ ಮಧ್ಯರಾತ್ರಿಯಲ್ಲಿ ದೂರವನ್ನು ಪ್ರಯಾಣಿಸಿದನು. ರೈಲನ್ನು ಹತ್ತಿ ಇಳಿದದ್ದು ನೆನಪಿಲ್ಲ ಎಂಂದು ಪೊಲೀಸರ ಬಳಿ ಹೇಳಿದ್ದಾನೆ.ಡಿಕ್ಸನ್ ಅವರ ತಾಯಿಗೆ ತಕ್ಷಣ ಪೊಲೀಸರು ಆತನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಅವನನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ. ಈ ವೇಳೆ ಪೊಲೀಸರ ಜತೆ ಮಾತನಾಡಿದ ಆಕೆ,  ರಾತ್ರಿ 10 ಗಂಟೆಗೆ ಅವನನ್ನು ನೋಡಿದೆ. ಮನೆಯಿಂದ ಹೊರಗೆ ಬರುತ್ತಾನೆಂದು ಕೊಂಡಿರಲಿಲ್ಲ ಎಂದಿದ್ದಾಳೆ.

    ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರಧಾನ ಸಂಪಾದಕ ಕ್ರೇಗ್ ಗ್ಲೆಂಡೇ, ನಿದ್ರೆಯಲ್ಲಿ ನಡೆಯುವಾಗ ಅತಿ ಹೆಚ್ಚು ದೂರ ಕ್ರಮಿಸಿದ ವಿಶಿಷ್ಟ ದಾಖಲೆಯ ಬಗ್ಗೆ ಮಾತನಾಡುತ್ತಾ, “ವರ್ಷಗಳಲ್ಲಿ, ನಾವು ನಿದ್ರಾಹೀನತೆ, ಗೊರಕೆ, ಕನಸು, ಆಕಳಿಕೆ, ನಿದ್ರೆಯಲ್ಲಿ ನಡಿಗೆಗೆ ಸಂಬಂಧಿಸಿದಂತೆ ಗಿನ್ನೆಸ್ ವಿಶ್ವ ವಿಚಿತ್ರ ಪ್ರಕರಣವನ್ನು ದಾಖಲಿಸಿದ್ದೇವೆ. ನಿದ್ರೆಗೆ ಸಂಬಂಧಿಸಿದ ದಾಖಲೆಗಳು ಆಕರ್ಷಕವಾಗಿವೆ. ಏಕೆಂದರೆ ನಿದ್ರೆ ಮಾಡುವುದು ನಾವೆಲ್ಲರೂ ಮಾಡುವ ಕೆಲಸವಾಗಿದೆ… ಅಲ್ಲದೆ, ಮಾರಣಾಂತಿಕ ನಿದ್ರಾಹೀನತೆಯಂತಹ ಅಪರೂಪದ ಸ್ಥಿತಿಯಿಂದ ಬಳಲುತ್ತಿರುವುದು ದುರದೃಷ್ಟಕರ” ಎಂದಿದ್ದಾರೆ.

    ಮೈಕೆಲ್ ಡಿಕ್ಸನ್ ತನ್ನ ನಿದ್ರೆಯ ವಾಕಿಂಗ್ ಸಮಸ್ಯೆಯೊಂದಿಗೆ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ದಾಖಲೆಯನ್ನು ಯಾರು ಮತ್ತೆ ಬರೆಯುತ್ತಾರೆ ಎಂದು ನೋಡೋಣ……..

    ವಿಶ್ವಕಪ್ 2023 ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ನಟಿ ಊರ್ವಶಿ ರೌಟೇಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts