More

    ವಿಶ್ವಕಪ್ 2023 ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ನಟಿ ಊರ್ವಶಿ ರೌಟೇಲಾ

    ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ಉರ್ವಶಿ ರೌಟೆಲಾ ವಿಶ್ವಕಪ್ 2023 ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಐಸಿಸಿ ವಿಶ್ವಕಪ್ 2023 ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ನಟಿ ಊರ್ವಶಿ ರೌಟೇಲಾ. ಬಂಗಾರದ ಬಣ್ಣದಿಂದ ಮಿನುಗುವ ಡ್ರೆಸ್​​ ಧರಿಸಿರುವ ನಟಿ ಐಫೆಲ್ ಟವರ್‌ನ ಮುಂಭಾಗದಲ್ಲಿ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್​​ ಆಗಿದೆ.

     ಇದನ್ನೂ ಓದಿ: ನಾಚಿಕೆಯಾಗಬೇಕು! ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕ್​ ನಟಿ ಸೆಹರ್​ ಶಿನ್ವಾರಿ ನೀಡಿದ ಹೇಳಿಕೆ ವೈರಲ್​

    ಬಾರಿಯ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿರುವುದು ಗೊತ್ತೇ ಇದೆ. ಈ ಪಂದ್ಯಾವಳಿ ಪ್ರಾರಂಭವಾಗುವ ಮೊದಲು, ಟ್ರೋಫಿಯನ್ನು ಎಲ್ಲಾ ದೇಶಗಳಿಗೆ ತರಲಾಗುತ್ತದೆ. ಈ ಹಿನ್ನೆಲೆಯಲ್ಲಿ 2023ರ ವಿಶ್ವಕಪ್ ಟ್ರೋಫಿಯನ್ನು ಫ್ರಾನ್ಸ್ ನ ಐಫೆಲ್ ಟವರ್ ಎದುರು ಇತ್ತೀಚೆಗೆ ಅನಾವರಣಗೊಳಿಸಲಾಯಿತು.

    ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗಾಗಿ ಉಪವಾಸ ಕೈಗೊಂಡ ಪಾಕ್​ ಮೂಲದ ಮಹಿಳೆ ಸೀಮಾ ಹೈದರ್​​

    ಈ ಮಹತ್ವದ ಸಂದರ್ಭವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಅವರು ತಮ್ಮ ಸಾಮಾಜಿಕ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ನೀಡುತ್ತಿರುವ ಆಕರ್ಷಕ ಚಿತ್ರವನ್ನು ನಟಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ಯಾರಿಸ್ ಫ್ರಾನ್ಸ್‌ನ ಐಫೆಲ್ ಟವರ್‌ನಲ್ಲಿ “ಕ್ರಿಕೆಟ್ ವರ್ಲ್ಡ್ ಕಪ್ 2023 ಟ್ರೋಫಿಯನ್ನು ಅಧಿಕೃತವಾಗಿ ಲಾಂಚ್ ಮತ್ತು ಅನಾವರಣಗೊಳಿಸಿದ ಮೊದಲ ನಟಿ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ:  ಪ್ರಿಯಕರನ ಮೋಹಕ್ಕೆ ಬಿದ್ದ ಪತ್ನಿ; ದೇವಸ್ಥಾನಕ್ಕೆ ಹೋಗೋಣ ಎಂದು ಗಂಡನಿಗೆ ಸ್ಕೇಚ್​ ಹಾಕಿದ್ಲು!

    ಇದನ್ನು ನೋಡಿದ ಅಭಿಮಾನಿಗಳು, ಕ್ರಿಕೆಟ್ ವರ್ಲ್ಡ್ ಕಪ್ 2023 ಟ್ರೋಫಿ, ಕ್ರಿಕೆಟ್ ಶ್ರೇಷ್ಠತೆ ಮತ್ತು ಕ್ರೀಡಾ ಮನೋಭಾವದ ಸಂಕೇತವಾಗಿದೆ, ಸಿನಿಮಾ, ಕ್ರೀಡೆ ಮತ್ತು ಇತಿಹಾಸವು ಅತ್ಯಂತ ಅದ್ಭುತವಾದ ರೀತಿಯಲ್ಲಿ ಸಂಗಮಿಸಿದ ಕ್ಷಣ ಇದು. ಊರ್ವಶಿ ರೌಟೇಲಾ, ನೀವು ಮತ್ತೊಮ್ಮೆ ನಮಗೆ ಹೆಮ್ಮೆ ತಂದಿದ್ದೀರಿ!, ದೇಶದ ಹೆಮ್ಮೆ, ಇದು ಉತ್ತಮವಾದ ಚಿತ್ರವಾಗಿದೆ ಎಂದೆಲ್ಲಾ ಕಾಮೆಂಟ್​​​​ ಮಾಡುತ್ತಿದ್ದಾರೆ.

    67 ನೇ ವಯಸ್ಸಿನಲ್ಲಿ ಬಿಎ ಪೂರ್ಣಗೊಳಿಸಿದ ಬಾಲಿವುಡ್​​ ನಟನ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts