ತಂಬುಕುಟ್ಟಿರ ಟೀಂಗೆ 70 ರನ್‌ಗಳ ಜಯ

2 Min Read
ತಂಬುಕುಟ್ಟಿರ ಟೀಂಗೆ 70 ರನ್‌ಗಳ ಜಯ
ಮಣವಟ್ಟಿರ ತಂಡದ ಬ್ಯಾಟಿಂಗ್.

ಗೋಣಿಕೊಪ್ಪ: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆಯ ವಿಜಯಲಕ್ಷ್ಮೀ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ 25ನೇ ದಿನದ ಪಂದ್ಯಾವಳಿಯಲ್ಲಿ 6 ತಂಡಗಳು ಗೆಲುವಿನ ನಗೆ ಬೀರಿದವು.


ಚಿಮ್ಮಣಮಾಡ ಮತ್ತು ಮಣವಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿಮ್ಮಣಮಾಡ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಮಣವಟ್ಟಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ 54 ನಷ್ಟಕ್ಕೆ ರನ್ ಗಳಿಸಿ ಪಂದ್ಯ ಟೈ ಆಯಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಚಿಮ್ಮಣಮಾಡ ತಂಡ ಗೆಲುವು ಸಾಧಿಸಿತು.


ಪಂದ್ಯಂಡ ಮತ್ತು ತಂಬುಕುಟ್ಟೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಂಬುಕುಟ್ಟಿರ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಪಂದ್ಯಂಡ ತಂಡ 6 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 35 ರನ್ ಗಳಿಸಿ 70 ರನ್‌ಗಳ ಸೋಲು ಕಂಡಿತು.


ಕಳಕಂಡ ಮತ್ತು ಮಾಚೆಟ್ಟಿರ(ಬಾಳುಗೋಡು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಚೆಟ್ಟಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತು. ಕಳಕಂಡ ತಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.


ಮಾಚಮಾಡ ಮತ್ತು ಮಾಳೇಟಿರ(ಕೆದಮುಳ್ಳೂರ್) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಳೇಟಿರ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ಮಾಚಮಾಡ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 97 ರನ್‌ಗಳಿಸಿ 14 ರನ್‌ಗಳ ಸೋಲು ಕಂಡಿತು.


ನೆರವಂಡ ಮತ್ತು ಕುಂದತ್ ಮಾಳೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆರವಂಡ ತಂಡ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು. ಕುಂದತ್ ಮಾಳೇಟಿರ ತಂಡ 8 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ 35 ರನ್‌ಗಳ ಸೋಲು ಕಂಡಿತು.

See also  ರೋಹಿತ್ ಶರ್ಮ ಕೇವಲ ಒಬ್ಬ ಕ್ಯಾಪ್ಟನ್​ ಅಲ್ಲ, ಅವರು… ಪಿಯೂಷ್ ಚಾವ್ಲಾ ಮಾತಿಗೆ ತಲೆಬಾಗಿದ ಕ್ರಿಕೆಟ್ ಫ್ಯಾನ್ಸ್​


ಬಲ್ಲಚಂಡ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಣತಂಡ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ಬಲ್ಲಚಂಡ ತಂಡ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ 52 ರನ್‌ಗಳ ಸೋಲು ಕಂಡಿತು.


ಕಳಕಂಡ ಮತ್ತು ಮಾಚೇಟಿರ ತಂಡಗಳ ನಡುವಿನ ಪಂದ್ಯಾವಳಿಯನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮತ್ತು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ವೀಕ್ಷಿಸಿದರು. ಇದಕ್ಕೂ ಮುನ್ನ ವಿನಾಯಕ ನರ್ವಾಡೆ ಒಂದು ಓವರ್ ಬೌಲ್ ಮಾಡಿ ಜಿಲ್ಲಾಧಿಕಾರಿ ಬ್ಯಾಟ್ ಮಾಡಿದರು. ನಂತರ ಜಿಲ್ಲಾಧಿಕಾರಿ ಬೌಲಿಂಗ್‌ಗೆ ವಿನಾಯಕ್ ನರ್ವಾಡೆ ಬ್ಯಾಟ್ ಮಾಡಿ ಗಮನ ಸೆಳೆದರು.

Share This Article