ಶೋಷಿತ ಸಮುದಾಯಗಳ ದನಿ ಗದ್ದರ್: ಎಸ್.ಎನ್.ಮಲ್ಲಪ್ಪ ಹೇಳಿಕೆ

23bdvt1
ಭದ್ರಾವತಿಯಲ್ಲಿ ಆಯೋಜಿಸಿದ್ದ ಕವಿ ಗದ್ದರ್ ಒಂದು ನೆನಪು ಕಾರ್ಯಕ್ರಮವನ್ನು ಎಸ್.ಎನ್.ಮಲ್ಲಪ್ಪ ಉದ್ಘಾಟಿಸಿದರು. ಕೆ.ದೇವೇಂದ್ರಪ್ಪ, ಕೆ.ಎಸ್.ಅಶೋಕ್, ಚಿನ್ನಯ್ಯ, ಸತ್ಯ ಭದ್ರಾವತಿ, ಸಿ.ಜಯಪ್ಪ, ಸುರೇಶ್, ರಾಜು. ಈಶ್ವರಪ್ಪ, ಕಾಣಿಕ್‌ರಾಜ್ ಇತರರಿದ್ದರು.
Published on

ಭದ್ರಾವತಿ: ಕ್ರಾಂತಿಕಾರಿ ಗದ್ದರ್ ಅವರು ಗೀತೆಗಳ ಮೂಲಕ ಶೋಷಿತ ಸಮುದಾಯಗಳ ಸಮಸ್ಯೆಗಳನ್ನು ತಿಳಿಸುವ ಕೆಲಸ ಮಾಡಿದರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್.ಮಲ್ಲಪ್ಪ ಹೇಳಿದರು.

ನಗರದ ಉಂಬ್ಳೇಬೈಲು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಆಯೋಜಿಸಿದ್ದ ಕ್ರಾಂತಿಕಾರಿ ಗದ್ದರ್-ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗದ್ದರ್ ರಚಿಸುತ್ತಿದ್ದ ಕ್ರಾಂತಿ ಗೀತೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವು. ದೇಶದ ವಿವಿಧ ಭಾಗಗಳಲ್ಲಿ ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವAತೆ ಅವರು ಸಾಹಿತ್ಯವನ್ನು ರಚಿಸಿ ಹಾಡುತ್ತಿದ್ದರು. ಆದರೆ ಇಂದು ದೇಶದಲ್ಲಿ ಕೋಮುವಾದಿ ಸರ್ಕಾರಗಳು ತುರ್ತು ಪರಿಸ್ಥಿತಿ ಹೇರುವಂತಹ ವಾತಾವರಣ ನಿರ್ಮಿಸುತ್ತಿದ್ದು ಸಾಹಿತಿಗಳು ತಮ್ಮ ಮನದಾಳದ ಮಾತುಗಳನ್ನು ಸಾಹಿತ್ಯದ ಮೂಲಕ ಹೇಳಲು ಹಿಂಜರಿಯುವAತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದಾವಣಗೆರೆಯ ಸಾಮಾಜಿಕ ಹೋರಾಟಗಾರ ಕೆ. ದೇವೇಂದ್ರಪ್ಪ ಮಾತನಾಡಿ, ಗದ್ದರ್ ಎಂಬ ಅದ್ಭುತ ಶಕ್ತಿ ನಮ್ಮೊಡನೆ ಇಂದಿಗೂ ಇದೆ. ನಾಲ್ಕು ದಶಕಗಳಲ್ಲಿ ನೂರಾರು ಗದ್ದರ್‌ಗಳನ್ನು ಹುಟ್ಟು ಹಾಕಿದ್ದಾರೆ. ಅವರು ನಮ್ಮೊಳಗೆ ಮರು ಹುಟ್ಟು ಪಡೆದಿದ್ದಾರೆ. ಅವರ ಸಾಹಿತ್ಯ ರಚನೆಗಳು ಈ ದೇಶದ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದಿವೆ. ಅವರ ಚಳವಳಿಗಳು ಮರುಹುಟ್ಟು ಪಡೆಯಬೇಕಿದೆ ಎಂದರು.
ಕರ್ನಾಟಕ ಜನಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಈ ದೇಶವನ್ನಾಳುವ, ಆಳಿದ ಎಲ್ಲರೂ ಇತಿಹಾಸದ ಪುಟ ಸೇರಲು ಸಾಧ್ಯವಿಲ್ಲ. ಸಮಾಜಮುಖಿ ಚಿಂತನೆಗಳನ್ನು ಮಾಡುವ ಬುದ್ಧ, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಅವರಂತಹ ವ್ಯಕ್ತಿಗಳು ಮಾತ್ರ ಇತಿಹಾಸದ ಪುಟ ಸೇರುತ್ತಾರೆ. ಅಂತಹವರ ಸಾಲಿನಲ್ಲಿ ಬಡವರು, ದೀನದಲಿತರ ಆಶಾಕಿರಣವಾಗಿದ್ದ ಗದ್ದರ್ ಕೂಡ ಒಬ್ಬರು ಎಂದರು.
ಕದಸAಸ ತಾಲೂಕು ಸಂಚಾಲಕ ಕೆ.ರಂಗನಾಥ್, ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಸಿ.ಜಯಪ್ಪ, ಸುರೇಶ್, ರಾಜು, ಈಶ್ವರಪ್ಪ, ಕಾಣಿಕ್‌ರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net