ಮೋದಿ ಪ್ರಧಾನಿಯಾಗಲು… ನಾನು ಸಿಎಂ ಆಗಲು ಸಂವಿಧಾನ ಕಾರಣ; ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ನಾನು ರಾಜ್ಯದ ಮುಖ್ಯಮಂತ್ರಿಯಾಗಲು, ಮೋದಿ ದೇಶದ ಪ್ರಧಾನಿಯಾಗಲು ಡಾ.ಬಿ.ಆರ್.ಅಂಬೇಡ್ಕರ್ ಕಾರಣ. ಹಾಗಂತ ಎಲ್ಲರೂ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಓದಿಕೊಂಡು, ಅದೇ ದಾರಿಯಲ್ಲಿ ಸಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ, ನಾನು ಅಂಬೇಡ್ಕರ್ ಅಲ್ಲ... ಅವರ ಅನುಯಾಯಿ. ಸುಳ್ಳು ಪ್ರಚಾರ ಮಾಡಿ ನನ್ನನ್ನು ಜಾತಿ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನು ಯಾವ ಜಾತಿಯನ್ನೂ ವಿರೋಧಿಸುತ್ತಿಲ್ಲ ಮತ್ತು ಯಾವ ಜಾತಿಯ ಪರವಾಗಿಯೂ ಇಲ್ಲ. ನಾನು ಮನುಷ್ಯರ ಪರವಾಗಿ ಇರುವವನು. ಸಂವಿಧಾನವನ್ನು ಯಾರು ವಿರೋಧ ಮಾಡುತ್ತಾರೋ, ನಾನು ಅವರ ವಿರೋಧಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮಾತನಾಡುತ್ತಾ, ಮುಂದುವರಿದ ಜನಾಂಗಕ್ಕೆ 10% ಮೀಸಲಾತಿ ಕೊಟ್ಟಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ವರ್ಗವನ್ನೂ ಸಮಾನವಾಗಿ ನೋಡಿದ್ದೇನೆ. ಒಂದು ವೇಳೆ ನಾನು ಇಲ್ಲದೇ ಹೋಗಿದ್ದರೆ ಕುರುಬ ಸಂಘವನ್ನು ಯಾರ್ಯಾರೋ ಮಾರಿಕೊಂಡು ತಿಂದು ಬಿಡುತ್ತಾ ಇದ್ದರು. ಈ ವೇಳೆ ನನಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net