ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು ನಾನು ತಪ್ಪು ಮಾಡಿದ್ದೇನೆ; ಸಮಂತಾಗೆ ಮಾಡಿದ ಮೋಸವನ್ನು ಒಪ್ಪಿಕೊಂಡ್ರಾ ನಾಗಚೈತನ್ಯ?

Samantha Chaithanya
Published on

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಚಿತ್ರದ ವಿಚಾರ ಹೊರತುಪಡಿಸಿ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿರುವ ನಟ ನಾಗಚೈತನ್ಯ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಚಲನಚಿತ್ರ ಒಂದರ ಪ್ರಮೋಷನ್​ನಲ್ಲಿ ತೊಡಗಿರುವ ನಟ ನಾಗಚೈತನ್ಯಗೆ ಸಂಬಂಧದ ಕುರಿತು ಪ್ರಶ್ನೆ ಒಂದು ಎದುರಾಗುತ್ತದೆ. ಈ ವೇಳೆ ಇದಕ್ಕೆ ಉತ್ತರಿಸುವ ನಾಗಚೈತನ್ಯ ಜೀವನದಲ್ಲಿ ಎಲ್ಲವನ್ನೂ ಅನುಭವಿಷಬೇಕಾಗುತ್ತದೆ. ಸಂಬಂಧಗಳ ವಿಚಾರಕ್ಕೆ ಬರುವುದಾದರೆ ನಾನು ಮೋಸ ಮಾಡಿದ್ದೇನೆ. ನೀವು ಬೆಳೆದಾಗ ಮತ್ತು ಲೆಕ್ಕಾಚಾರ ಮಾಡುವಾಗ ಅದು ಸರಿ ಅನ್ನಿಸುತ್ತೆ, ನಾನು ಎಲ್ಲಾ ಅನುಭವಗಳನ್ನು ಹೊಂದಿದ್ದೇನೆ, ಈಗ ಅದಕ್ಕೆ ಉತ್ತರಿಸುವ ಸಮಯ ಬಂದಿದೆ ಎಂದು ನಟ ಬಹಿರಂಗವಾಗಿ ತಾವು ಮೋಸ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಅದಕ್ಕೆ ಈತ ಅರ್ಹವಾದದ್ದನ್ನು ಪಡೆದಿದ್ದಾನೆ ಎಂದು ಹೇಳುವ ಮೂಲಕ ಸಮಂತಾ ಜೊತೆಗಿನ ಬ್ರೇಕಪ್​ ಕುರಿತು ಮಾತನಾಡಿದ್ದಾರೆ. ಕೆಲವರು ಇದು ಮದುವೆಗಿಂತ ಮುಂಚಿನ ವಿಡಿಯೋ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು ಕಮೆಂಟ್​ ಹಾಕಿದ್ದಾರೆ. ಒಟ್ಟಿನಲ್ಲಿ ನಟ ನಾಗಚೈತನ್ಯ ಹೇಳಿಕೆಯ ವಿಡಿಯೋ ಸಿನಿ ಇಂಡಸ್ಟ್ರಿಯಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ನಟ ನಾಗಚೈತನ್ಯ ಕಳೆದ ಒಂದು ವರ್ಷದಿಂದ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಇಬ್ಬರು ಈವರೆಗೆ ಮಾತನಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net