

ಅಮೆರಿಕ: ತಂತ್ರಜ್ಞಾನ ವ್ಯವಹಾರದಲ್ಲಿ ಪ್ರಮುಖ ಬ್ರಾಂಡ್ ಆಗಿರುವ (Apple) ಆ್ಯಪಲ್ 90ರ ದಶಕದಲ್ಲಿ ತನ್ನ ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಹಾರಾಜು ಹಾಕಿದೆ.
ಆ್ಯಪಲ್ ಕಂಪನಿಯು 10.5 ಸೈಜ್ ಇರುವ ಪುರುಷರಿಗಾಗಿ ತಯಾರಿಸಿರುವ ಒಂದು ಜೋಡಿ ಬಿಳಿ ಶೂ 50,000 ಡಾಲರ್ (ಅಂದಾಜು 40 ಲಕ್ಷ)ಕ್ಕೆ ಮಾರಾಟವಾಗುತ್ತಿದೆ.
90ದಶಕದಲ್ಲಿ ಆಪಲ್ ಉದ್ಯೋಗಿಗಳಿಗಾಗಿ ಮಾತ್ರ ವಿಶೇಷವಾದ ಶೂ ತಯಾರಿಸಲಾಗಿತ್ತು. ಈ ಶೂ ಬಿಳಿ ಬಣ್ಣವನ್ನು ಹೊಂದಿದೆ ಹಾಗೂ ಇದರ ಮೇಲೆ ಮಳೆಬಿಲ್ಲು ಬಣ್ಣಗಳಿಂದ ಆವೃತ್ತವಾಗಿರುವ ಆ್ಯಪಲ್ನ ಹಳೆಯ ಲೋಗೋ ಕೂಡಾ ಇದೆ. ಈ ಅಪರೂಪದ ಶೂನನ್ನು ಕಂಪನಿಯು ಹರಾಜಿನಲ್ಲಿಟ್ಟಿದೆ.
ಹರಾಜಿನ ಬೆಲೆಯನ್ನು ನೀವು ಊಹಿಸಬಹುದೇ?: ಈ ಅಪರೂಪದ ಒಂದು ಜೋಡಿಯ ಶೂ 50,000 USD (ಅಂದಾಜು. 41 ಲಕ್ಷ INR)ಗೆ ಮಾರಾಟ ಮಾಡಲಾಗುತ್ತಿದೆ. ಆ್ಯಪಲ್ ಉದ್ಯೋಗಿಗಳಿಗಾಗಿ ಪ್ರತ್ಯೇಕವಾಗಿ ತಯಾರಿಸಲಾದ ಈ ಉತ್ಪನ್ನ ಅಂತಿಮ ಬಿಡ್ ನಂತರ ಬೆಲೆ ಇನ್ನೂ ಹೆಚ್ಚಿರಬಹುದು ಎಂದು ವರದಿ ಸೂಚಿಸಿದೆ.