More

    ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ

    ಇಂಫಾಲ್​: ಮಣಿಪುರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಸಾಕಷ್ಟು ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ಮೊನ್ನೆಯಷ್ಟೇ ಬೆಳಕಿಗೆ ಬಂದು ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಪ್ರಧಾನಿ ಮೋದಿ ಕೂಡ ಘಟನೆಯನ್ನು ಖಂಡಿಸಿದರು. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಬುಡಕಟ್ಟು ಜನಾಂಗದ ಸಂತ್ರಸ್ತ ಯುವತಿಯೊಬ್ಬಳು ತಾನು ಎದುರಿಸಿದ ಕರಾಳ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾಳೆ.

    ಕರೆದುಕೊಂಡು ಹೋಗುತ್ತಿರುವಾಗಲೇ ಅತ್ಯಾಚಾರ

    ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು 19 ವರ್ಷದ ಯುವತಿ ಎಟಿಎಂ ಒಳಗೆ ಹೋದಾಗ ಒಂದು ಗುಂಪಿನ ಜನರು ಅಪಹರಿಸಿ, ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಂದೂಕಿನ ಹಿಡಿಯಿಂದ ನನ್ನ ಮೇಲೆ ಹಲ್ಲೆ ಮಾಡಿದರು. ನನಗೆ ಆಹಾರವಾಗಲಿ ಅಥವಾ ನೀರನ್ನಾಗಲಿ ಕೊಡಲೇ ಇಲ್ಲ. ಮೇ 15ರಂದು ನನ್ನನ್ನು ಕಣಿವೆ ಮೂಲದ ದಂಗೆಕೋರ ಗುಂಪಿಗೆ ದುಷ್ಕರ್ಮಿಗಳು ಹಸ್ತಾಂತರಿಸಿದರು. ನನ್ನನ್ನು ಬಿಳಿ ಬಣ್ಣದ ಬೊಲೆರೋ ಕಾರಿನಲ್ಲಿ ನಾಲ್ಕು ಮಂದಿ ಕರೆದೊಯ್ದರು. ನನ್ನನ್ನು ಕರೆದುಕೊಂಡು ಹೋಗುತ್ತಿರುವಾಗಲೇ ಚಾಲಕನನ್ನು ಹೊರತುಪಡಿಸಿ ಮೂವರು ಅತ್ಯಾಚಾರ ಮಾಡಿದರು. ಬಳಿಕ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಅಲ್ಲಿ ಹಲ್ಲೆ ಮಾಡಿ, ಕಿರುಕುಳ ನೀಡಿದರು ಎಂದು ಸಂತ್ರಸ್ತ ಯುವತಿ ಬಿಚ್ಚಿಟ್ಟಿದ್ದಾಳೆ.

    ಇದನ್ನೂ ಓದಿ: ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಾಸ್ ಪಡೆಯುವ ವಿಚಾರ: ತಕ್ಷಣ ವಾಪಾಸ್ ತೆಗೆದುಕೊಳ್ಳುವುದಕ್ಕೆ ಆಗೋದಿಲ್ಲ ಎಂದ ಗೃಹಸಚಿವ ಜಿ ಪರಮೇಶ್ವರ್

    ರಾತ್ರಿಯೆಲ್ಲ ಕೆಟ್ಟದಾಗಿ ನಡೆಸಿಕೊಂಡರು

    ಇಡೀ ರಾತ್ರಿ ನನ್ನನ್ನು ಕೀಳಾಗಿ ನಡೆಸಿಕೊಂಡು. ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದರು. ಆದರೆ, ಒಂದು ಚೂರು ಊಟ ಸಹ ನೀಡಲಿಲ್ಲ. ನೀರನ್ನೂ ಕೂಡ ಕೊಡಲಿಲ್ಲ. ಮಾರನೇ ದಿನ ಬೆಳಗ್ಗೆ ವಾಶ್​ರೂಮ್​ಗೆ ಹೋಗಿ ಬರುತ್ತೇನೆ ಕಟ್ಟು ಬಿಚ್ಚಿ ಎಂದು ಕೇಳಿಕೊಂಡೆ. ಅದಕ್ಕೂ ಅವರು ಒಪ್ಪಲಿಲ್ಲ. ಆದರೆ, ಅವರಲ್ಲಿ ಒಬ್ಬ ದಯೆ ತೋರಿ ನನ್ನ ಕೈಗೆ ಮತ್ತು ಕಣ್ಣಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದನು. ನಾನು ಕಣ್ಣು ತೆರೆದು ಸುತ್ತಲೂ ಏನಿದೆ ಮತ್ತು ಏನು ನಡೆಯುತ್ತಿದೆ ಎಂದು ನೋಡಿದೆ. ಆ ಬಳಿಕ ಬೆಟ್ಟದಿಂದ ಕೆಳಗೆ ಓಡಲು ನಿರ್ಧರಿಸಿ, ಅಲ್ಲಿಂದ ಎಸ್ಕೇಪ್​ ಆದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

    ಜುಲೈ 21ರಂದು ದೂರು

    ನರಕ ಕೂಪದಿಂದ ಪರಾರಿಯಾದ ಸಂತ್ರಸ್ತೆಗೆ ಆಟೋ ಚಾಲಕರೊಬ್ಬರು ಸುರಕ್ಷಿತವಾಗಿ ತರಕಾರಿಗಳ ರಾಶಿಯಲ್ಲಿ ಬಚ್ಚಿಟ್ಟು ಕೊರೆದೊಯ್ದರು. ಕೊನೆಗೂ ಕಾಂಗ್ಪೋಕ್ಪಿಗೆ ತಲುಪಿದೆ ಸಂತ್ರಸ್ತೆಯನ್ನು ಚಿಕಿತ್ಸೆಗೆಂದು ನೆರೆಯ ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕಾಂಗ್‌ಪೋಕ್ಪಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ಜುಲೈ 21ರಂದು ಪೊಲೀಸರಿಗೆ ದೂರು ನೀಡಲು ನನಗೆ ಸಾಧ್ಯವಾಯಿತು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಇದನ್ನೂ ಓದಿ: ಆಲಿಕಲ್ಲು ಮಳೆಯಿಂದಾಗಿ ನ್ಯೂಯಾರ್ಕ್‌ಗೆ ತೆರಳುವ ವಿಮಾನ ತುರ್ತು ಭೂಸ್ಪರ್ಶ

    ಸಾಕ್ಷಿಗಳ ಕೊರತೆ

    ಘಟನೆ ನಡೆದು ಸುಮಾರು ಎರಡು ತಿಂಗಳ ನಂತರ ಪೊಲೀಸರು ಗ್ಯಾಂಗ್​ರೇಪ್​ ಪ್ರಕರಣ, ಕ್ರಿಮಿನಲ್​ ಬೆದರಿಕೆ ಮತ್ತು ಕೊಲೆ ಮಾಡುವ ಉದ್ದೇಶದಿಂದ ಅಪಹರಣ ಮಾಡಿರುವ ಸಂಬಂಧ ಇಂಫಾಲ್​ನ ಪೊರೊಂಪಾತ್​ ಪೊಲೀಸ್​ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಅಲ್ಲದೆ, ಸಂತ್ರಸ್ತೆಯಿಂದ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಘಟನೆ ನಡೆದ ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈವರೆಗೂ ಯಾವೊಬ್ಬ ಆರೋಪಿಯನ್ನು ಗುರುತಿಸಿಲ್ಲ ಮತ್ತು ಯಾರೊಬ್ಬರನ್ನು ಬಂಧಿಸಿಲ್ಲ. ಪ್ರಕರಣ ಸಂಬಂಧ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ಸದ್ಯಕ್ಕೆ ತನಿಖೆ ಮುಂದುವರಿದಿದ್ದು, ಸಾಕ್ಷಿಗಳ ಕೊರತೆಯಿಂದ ತನಿಖೆಗೆ ಹಿನ್ನಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ

    ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ವಿಜಯ ದಿವಸ ಆಚರಣೆ | ಹುತಾತ್ಮರನ್ನು ಸ್ಮರಿಸಿದ ಗಣ್ಯರು; ವಿಶೇಷ ಪುರವಣಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts