More

    ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಕಮಾಂಡೋಗೆ ಗಾಯ

    ಇಂಫಾಲ/ನವದೆಹಲಿ: ಹಲವು ತಿಂಗಳು ಕಾಲ ಹಿಂಸಾಚಾರದಿಂದಾಗಿ 180ಕ್ಕೂ ಜನರ ಸಾವಿಗೆ ಜರುಗಿದ್ದ ಮಣಿಪುರದಲ್ಲಿ ಈಗ ಮತ್ತೆ ಹೊಸದಾಗಿ ಹಿಂಸಾಚಾರದ ಘಟನೆಗಳು ನಡೆದಿವೆ. ಮಣಿಪುರದ ಗಡಿ ಪಟ್ಟಣ ಮೊರೆಹ್‌ನಲ್ಲಿ ಶನಿವಾರ ಶಂಕಿತ ಬಂಡುಕೋರರು ಮತ್ತು ಪೊಲೀಸ್ ಕಮಾಂಡೋಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದಂಗೆಕೋರರು ಮೋರೆಹ್ ಪಟ್ಟಣದಿಂದ ಗಸ್ತು ತಿರುಗುವ ಸ್ಥಳಕ್ಕೆ ತೆರಳುತ್ತಿದ್ದ ಪೊಲೀಸ್ ವಾಹನಗಳ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ.

    ಈ ಸಂದರ್ಭದಲ್ಲಿ ಒಬ್ಬ ಕಮಾಂಡೋ ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಮೊರೆಯಲ್ಲಿ ಮತ್ತೆ ಹಿಂಸಾಚಾರ ಉಲ್ಬಣಿಸಿದ್ದು, ಈಗ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

    ಇನ್ನೊಂದು ಘಟನೆಯಲ್ಲಿ, ರಾಜ್ಯ ರಾಜಧಾನಿ ಇಂಫಾಲ್‌ನಿಂದ 45 ಕಿಮೀ ದೂರದಲ್ಲಿರುವ ಮಣಿಪುರದ ಬೆಟ್ಟದ ಜಿಲ್ಲೆ ಕಾಂಗ್‌ಪೋಕ್ಪಿಯಲ್ಲಿ ಅಪರಿಚಿತ ವ್ಯಕ್ತಿಗಳು ಹದಿಹರೆಯದವರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ಶನಿವಾರ ಬೆಳಗಿನ ಜಾವ 2.30ಕ್ಕೆ ಈ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಈ ಯುವಕನ ಹತ್ಯೆಯನ್ನು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖಂಡಿಸಿದ್ದಾರೆ. “ಕೆಲವು ದುಷ್ಟ ಶಕ್ತಿಗಳು ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿವೆ. ಇದು ದುರದೃಷ್ಟಕರ ಘಟನೆ. ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಪರಾಧಿಗಳನ್ನು ಹಿಡಿಯಲು ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ನಾವು ಅಪರಾಧಿಗಳನ್ನು ಬಿಡುವುದಿಲ್ಲ,” ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    “ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಅನೇಕ ನಾಗರಿಕ ಸಮಾಜ ಗುಂಪುಗಳು ಶ್ರಮಿಸುತ್ತಿವೆ. ಈ ತಾಜಾ ಘಟನೆಯು ಅತ್ಯಂತ ಖಂಡನೀಯವಾಗಿದೆ. ನಾವು ಮಾತುಕತೆ ನಡೆಸೋಣ. ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸೋಣ” ಎಂದೂ ಅವರು ಹೇಳಿದರು.

    ಈಶಾನ್ಯ ರಾಜ್ಯವಾದ ಮಣಿಪುರವು ಮೇ 3, 2023 ರಿಂದ ಜನಾಂಗೀಯ ಹಿಂಸಾಚಾರ ನಡೆದಿದೆ. ಪರಿಶಿಷ್ಟ ಪಂಗಡಕ್ಕೆ (ST) ಸೇರಿಸಬೇಕೆಂಬ ಮೈತೆಯಿ ಸಮುದಾಯದ ಬೇಡಿಕೆ ವಿರೋಧಿಸಿ ಪ್ರತಿಭಟಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಡೆದ ನಂತರ ಹಿಂಸಾಚಾರಗಳು ಭುಗಿಲೆದ್ದಿದ್ದವು. ಈ ಹಿಂಸಾಚಾರದಲ್ಲಿ ಇದುವರೆಗೂ 180 ಅಧಿಕ ಜನರು ಸಾವನ್ನಪ್ಪಿದ್ದಾರೆ.

    ಅಂಬಾನಿ, ಅದಾನಿ, ಟಾಟಾ ಮೀರಿಸಿದ ಜಗತ್ತಿನ ಶ್ರೀಮಂತ ಮಹಿಳೆ: ಬೈಬಲ್​ ಓದು, ಪಿಯಾನೊ ನುಡಿಸುವಿಕೆ ಈಕೆಯ ಹವ್ಯಾಸ!

    ಅಯೋಧ್ಯೆಯ ಲತಾ ಮಂಗೇಶ್ವರ್​ ಚೌಕ್​ನಲ್ಲಿ ಭಾವುಕರಾದ ಮೋದಿ: ಇಲ್ಲಿದ ಬೃಹದಾಕಾರದ ವೀಣೆ

    ಚಹಾ ನಿಜವಾಗಿಯೂ ಚೆನ್ನಾಗಿದೆ; ನಾನು ಚಾಯ್​ವಾಲಾ ಆಗಿದ್ದೆ… ಅಯೋಧ್ಯೆಯಲ್ಲಿ ಪ್ರಧಾನಿ ಹೀಗೆ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts