More

    ಅಯೋಧ್ಯೆಯ ಲತಾ ಮಂಗೇಶ್ವರ್​ ಚೌಕ್​ನಲ್ಲಿ ಭಾವುಕರಾದ ಮೋದಿ: ಇಲ್ಲಿದ ಬೃಹದಾಕಾರದ ವೀಣೆ

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿನ ಲತಾ ಮಂಗೇಶ್ಕರ್ ಚೌಕ್‌ಗೆ ಭೇಟಿ ನೀಡಿದರು. ಇಲ್ಲಿ ಸ್ಥಾಪಿಸಲಾದ 14 ಟನ್ ತೂಕದ ಮತ್ತು 40 ಅಡಿ ಉದ್ದದ ಆಕರ್ಷಕ ‘ವೀಣೆ’ಯನ್ನು ವೀಕ್ಷಿಸಿದರು.

    ಈ ಸಂದರ್ಭದಲ್ಲಿ ಭಾವುಕರಾದ ಅವರು ವೀಣೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಈ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.

    ಅಯೋಧ್ಯಾ ಧಾಮ್ ರೈಲು ನಿಲ್ದಾಣದ ಉದ್ಘಾಟನೆ ನಂತರ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ವೇಳೆ ಮೋದಿ ಲತಾ ಚೌಕ್‌ಗೆ ಭೇಟಿ ನೀಡಿದರು. ಈ ಚೌಕ್ ಅನ್ನು ಸೆಪ್ಟೆಂಬರ್ 28, 2022 ರಂದು ಹೆಸರಾಂತ ಹಿನ್ನೆಲೆಯ ಗಾಯಕಿ, ಭಾರತ ರತ್ನ ಪುರಸ್ಕೃತ ದಿವಂಗತ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು ಉದ್ಘಾಟಿಸಲಾಗಿದೆ, ಸಿಎಂ ಯೋಗಿ ಅವರು ಲತಾ ಚೌಕ್​ ಉದ್ಘಾಟನೆ ನೆರವೇರಿಸಿದ್ದರು. ಪ್ರಧಾನಿ ಮೋದಿ ಅವರು ಆನ್​ಲೈನ್​ ಮೂಲಕ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಹಾಗೂ ಅನೇಕ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಗುಜರಾತ್‌ನಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿ (ವಿಶ್ವದ ಅತಿ ಎತ್ತರದ ಪ್ರತಿಮೆ) ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ವಾಂಜಿ ಸುತಾರ್ ಅವರು ಈ ವೀಣೆಯನ್ನು ವಿನ್ಯಾಸಗೊಳಿಸಿದ್ದಾರೆ. ಲತಾ ಚೌಕ್​ ನಿರ್ಮಾಣಕ್ಕಾಗಿ 7.9 ಕೋಟಿ ರೂಪಾಯಿಗಳನ್ನು ಉತ್ತರ ಪ್ರದೇಶ ಸರ್ಕಾರ ವಿನಿಯೋಗಿಸಿದೆ.

    ಚಹಾ ನಿಜವಾಗಿಯೂ ಚೆನ್ನಾಗಿದೆ; ನಾನು ಚಾಯ್​ವಾಲಾ ಆಗಿದ್ದೆ… ಅಯೋಧ್ಯೆಯಲ್ಲಿ ಪ್ರಧಾನಿ ಹೀಗೆ ಹೇಳಿದ್ದೇಕೆ?

    2023ರಲ್ಲಿ ಮಿಡ್​ ಕ್ಯಾಪ್​ಗಳಲ್ಲಿ ಶೇ. 46.57ರಷ್ಟು ಲಾಭ: ಟಾಪ್​ 10 ಷೇರುಗಳಲ್ಲಿ ಹಣ ತೊಡಗಿಸಿದವರು ಈಗ ಕುಬೇರರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts